ಲವಂಗ ತಿನ್ನೋದ್ರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ..?

0
Spread the love

ಲವಂಗವು ಅತ್ಯಂತ ಜನಪ್ರಿಯ ಮಸಾಲೆಗಳಲ್ಲಿ ಒಂದಾಗಿದೆ. ಇದನ್ನು ಬಳಸುವ ಭಕ್ಷ್ಯಗಳ ರುಚಿ ಎರಡು ಪಟ್ಟು ಹೆಚ್ಚಾಗುತ್ತದೆ. ಲವಂಗವು ತನ್ನದೇ ಆದ ಔಷಧೀಯ ಗುಣಗಳನ್ನು ಹೊಂದಿದೆ, ಆದ್ದರಿಂದ ದಿನಕ್ಕೆ 2 ಲವಂಗಗಳನ್ನು ತಿನ್ನುವುದರಿಂದ ನಿಮ್ಮ ಅನೇಕ ರೋಗಗಳನ್ನು ಗುಣಪಡಿಸಬಹುದು. ಲವಂಗ ಹೇಗೆ ಆರೋಗ್ಯಕ್ಕೆ ಬಹಳ ಪರಿಣಾಮಕಾರಿ ಅಂತ ನೋಡೋಣ.

Advertisement

ಲವಂಗದಲ್ಲಿ ರಂಜಕ, ಸೋಡಿಯಂ, ಪೊಟ್ಯಾಸಿಯಮ್, ವಿಟಮಿನ್ ಕೆ, ಫೈಬರ್, ಒಮೆಗಾ 3 ಕೊಬ್ಬಿನಾಮ್ಲಗಳು, ಮೆಗ್ನೀಸಿಯಮ್, ಕಬ್ಬಿಣ ಅಂಶ ಸೇರಿದಂತೆ ಅನೇಕ ಪೋಷಕಾಂಶಗಳಿವೆ. ಲವಂಗವು ರೋಗನಿರೋಧಕ ಸಾಮರ್ಥ್ಯವನ್ನೂ ವೃದ್ಧಿಸುತ್ತದೆ. ದೇಹದ ಅನೇಕ ರೋಗಗಳನ್ನು ಬುಡದಿಂದ ತೆಗೆದುಹಾಕಲು ಸಹಾಯ ಮಾಡುತ್ತದೆ.

  • ಲವಂಗದ ರಾತ್ರಿ ಬಳಕೆ ಮಾಡುವುದು ಬಹಳ ಪರಿಣಾಮಕಾರಿ. ರಾತ್ರಿ ಮಲಗುವ ಮೊದಲು 2 ಲವಂಗ ತಿಂದು ನಂತರ 1 ಗ್ಲಾಸ್ ಬಿಸಿನೀರನ್ನು ಕುಡಿಯಿರಿ. ಇದರಿಂದ ಗ್ಯಾಸ್ಟ್ರಿಕ್ ಸಮಸ್ಯೆ, ಹೊಟ್ಟೆ ಉರಿತ, ಕೀಲು ನೋವು ಮುಂತಾದ ಸಮಸ್ಯೆಗಳು ಇರುವುದಿಲ್ಲ. ಮಲಬದ್ಧತೆ, ಹೊಟ್ಟೆ ನೋವು, ಗ್ಯಾಸ್ಟ್ರಿಕ್ ಮತ್ತು ಅಜೀರ್ಣ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.
  • ಹಲ್ಲು ನೋವು ಅಥವಾ ಹಲ್ಲಿನಲ್ಲಿ ಹುಳುಗಳ ಸಮಸ್ಯೆ ಇದ್ದರೆ, ರಾತ್ರಿ ಮಲಗುವ ಮುನ್ನ 2 ಲವಂಗವನ್ನು ಸರಿಯಾಗಿ ಅಗಿಯಿರಿ ಮತ್ತು ನಂತರ 1 ಲೋಟ ಬೆಚ್ಚಗಿನ ನೀರನ್ನು ಕುಡಿಯಿರಿ.
  • ಲವಂಗವನ್ನು ತಿನ್ನುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ, ತಲೆನೋವು ನಿವಾರಣೆಗೆ ಸಹಾಯ ಮಾಡುತ್ತದೆ, ಬಾಯಿಯಿಂದ ಕೆಟ್ಟ ವಾಸನೆಯ ಸಮಸ್ಯೆ ಇದ್ದರೂ ಲವಂಗ ನಿಮಗೆ ಪ್ರಯೋಜನಕಾರಿಯಾಗುತ್ತದೆ.
  • ಗಂಟಲಿಗೆ ಸಂಬಂಧಿಸಿದ ಸಮಸ್ಯೆ ಇದ್ದರೆ, ಉದಾಹರಣೆಗೆ – ಗಂಟಲು ಸಮಸ್ಯೆ, ಗಂಟಲು ನೋವು, ಗಂಟಲಲ್ಲಿ ಕಫ, ಲವಂಗ ಕೂಡ ಈ ಎಲ್ಲ ಸಮಸ್ಯೆಗಳನ್ನು ತೆಗೆದು ಹಾಕುತ್ತದೆ.
  • ಲವಂಗವು ಖಾರವಾಗಿರುವ ಕಾರಣ ಅಗಿಯುವುದು ಅಥವಾ ತಿನ್ನಲು ನಿಮಗೆ ಕಷ್ಟವಾದರೆ, ಲವಂಗವನ್ನ ಚೆನ್ನಾಗಿ ಪುಡಿಮಾಡಿ ಅದನ್ನ 1 ಲೋಟ ನೀರಿನಲ್ಲಿ 2-3 ನಿಮಿಷ ಕುದಿಸಿ ಆರಿಸಿ ಕುಡಿಯಿರಿ.
  • ಮಕ್ಕಳಿಗೆ ಮಲಬದ್ಧತೆ ಅಥವಾ ಶೀತ ಕೆಮ್ಮು ಸಮಸ್ಯೆ ಇದ್ದರೆ, 1 ಲವಂಗವನ್ನು ಚೆನ್ನಾಗಿ ಪುಡಿಮಾಡಿ ಅರ್ಧ ಟೀ ಚಮಚ ಜೇನುತುಪ್ಪದಲ್ಲಿ ಹಾಕಿ ಮಕ್ಕಳಿಗೆ ಕೊಡಿ.

Spread the love

LEAVE A REPLY

Please enter your comment!
Please enter your name here