ಮುರುಡೇಶ್ವರ ಪ್ರವಾಸಕ್ಕೆ ತೆರಳಿದ್ದ 7 ವಿದ್ಯಾರ್ಥಿಗಳು ನೀರುಪಾಲು, ಮೂವರ ರಕ್ಷಣೆ, ಓರ್ವ ವಿದ್ಯಾರ್ಥಿ ಸಾವು..!

0
Spread the love

ಉತ್ತರ ಕನ್ನಡ :ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿಗಳ ಪೈಕಿ ಓರ್ವ ವಿದ್ಯಾರ್ಥಿನಿ ಸಾವು ಕಂಡರೇ ಮೂವರು ಕಾಣೆಯಾಗಿದ್ದು, ಮೂರು ಜನ ವಿದ್ಯಾರ್ಥಿನಿಯರನ್ನು ಮೀನುಗಾರರು ರಕ್ಷಣೆ ಮಾಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಟಳ ತಾಲೂಕಿನ ಮುರುಡೇಶ್ವರದಲ್ಲಿ ನಡೆದಿದೆ.

Advertisement

ಕೋಲಾರ ಜಿಲ್ಲೆಯ ಮುಳಬಾಗಿಲಿನಿಂದ ಮುರುಡೇಶ್ವರಕ್ಕೆ ಪ್ರವಾಸಕ್ಕೆ ಬಂದಿದ್ದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 54 ವಿದ್ಯಾರ್ಥಿನಿಯರು ಕಡಲಿನಲ್ಲಿ ಆಟವಾಡಲು ಇಳಿದಿದ್ದರು. ಈ ವೇಳೆ ಅಲೆಗಳ ಹೊಡೆತಕ್ಕೆ ಏಳು ವಿದ್ಯಾರ್ಥಿನಿಯರು ನೀರುಪಾಲಾಗಿದ್ದರು.

ಇದನ್ನು ಗಮನಿಸಿದ ಮೀನುಗಾರರು ಮೂವರನ್ನು ರಕ್ಷಿಸಿದ್ದಾರೆ. ಓರ್ವ ವಿದ್ಯಾರ್ಥಿನಿ ಸಾವನ್ನಪ್ಪಿದ್ದರೆ, ಮೂವರು ನಾಪತ್ತೆಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಶೋಧ ನಡೆಯುತ್ತಿದೆ. ಮುಳಬಾಗಿಲಿನ ಕೊತ್ತೂರು ಮೊರಾರ್ಜಿ ದೇಸಾಯಿ ವಸತಿ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಶಾವಂತಿ (15) ಸಾವು ಕಂಡ ವಿದ್ಯಾರ್ಥಿನಿಯಾಗಿದ್ದು ಮುಳಬಾಗಿಲಿನ ಯಶೋಧ, ವೀಕ್ಷಣಾ , ಲಿಪಿಕಾ ರಕ್ಷಣೆಗೊಳಗಾದವರಾಗಿದ್ದು ಇವರಲ್ಲಿ ಓರ್ವಳ ಸ್ಥಿತಿ ಗಂಭೀರವಾಗಿದ್ದು ಮೂವರಿಗೂ ಭಟ್ಕಳ ಸರ್ಕಾರಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.


Spread the love

LEAVE A REPLY

Please enter your comment!
Please enter your name here