ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಪಟ್ಟಣದ ಶಂಕರಭಾರತಿಮಠದಲ್ಲಿ ಬ್ರಹ್ಮವೃಂದ (ಬ್ರಾಹ್ಮಣ ಸಮಾಜ)ದ ವತಿಯಿಂದ ದತ್ತ ಜಯಂತಿ ಅಂಗವಾಗಿ ಕಳೆದ ಒಂದು ವಾರದಿಂದ ಅನೇಕ ಧಾರ್ಮಿಕ ಕಾರ್ಯಕ್ರಮಗಳು, ನಿತ್ಯ ಭಜನೆ, ರುದ್ರಾಭಿಷೇಕ, ವಿಶೇಷ ಅಲಂಕಾರಗಳನ್ನು ನೆರವೇರಿಸಲಾಯಿತು.
ಬಾಲಚಂದ್ರಶಾಸ್ತಿçÃಗಳು ಹುಲಮನಿ ಅವರ ಮಾರ್ಗದರ್ಶನದಲ್ಲಿ ಶ್ರೀಕಾಂತ ಪೂಜಾರ ಗುರುಚರಿತ್ರೆ ಪಾರಾಯಣವನ್ನು ಮಾಡಿದರು. ಶನಿವಾರ ದತ್ತಾತ್ರೇಯ ತೊಟ್ಟಿಲೋತ್ಸವ ಕಾರ್ಯಕ್ರಮವನ್ನು ವಿಪ್ರ ಮಹಿಳಾ ಮಂಡಳದ ನೇತೃತ್ವದಲ್ಲಿ ಸಂಪ್ರದಾಯದAತೆ ನೆರವೇರಿಸಲಾಯಿತು. ದೇವಸ್ಥಾನದ ಆವರಣದಲ್ಲಿ ಮಹಿಳೆಯರು ಸಡಗರ-ಸಂಭ್ರಮದಿAದ ತೋಟ್ಟಿಲೋತ್ಸವ ಕಾರ್ಯಕ್ರಮವನ್ನು ನಡೆಸಿದರು. ಈ ಸಂದರ್ಭದಲ್ಲಿ ವೇ.ಮೂ. ಬಾಲಚಂದ್ರಶಾಸ್ತಿçÃಗಳು ಹುಲಮನಿ ಮಾತನಾಡಿ, ದತ್ತಾತ್ರೇಯ ದೇವರನ್ನು ತ್ರಿದೇವನ ರೂಪವೆಂದು ಕರೆಯುವುದರ ಹಿಂದೆ ಪೌರಾಣಿಕ ಕಥೆಯಿದೆ. ದತ್ತಾತ್ರೇಯನ ಮೂರ್ತಿ ತ್ಯಾಗ, ಭಕ್ತಿ, ಜ್ಞಾನ, ಅನುಕಂಪಗಳ ಸಾಕಾರ ಮೂರ್ತಿಯಾಗಿದೆ. ಮಾರ್ಗಶಿರ ಮಾಸದಲ್ಲಿ ಬರುವ ಶುಕ್ಲಪಕ್ಷದ ಪೂರ್ಣಿಮೆ ದಿನದಂದು ದತ್ತಜಯಂತಿ ಆಚರಣೆ ಮಾಡಲಾಗುತ್ತದೆ.
ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ ಅವತಾರ ತ್ರಿಮೂರ್ತಿ ಸ್ವರೂಪ ದತ್ತಾತ್ರೇಯ ಎಂದು ಕರೆಯಲ್ಪಡುತ್ತದೆ. ದತ್ತ ಜಯಂತಿಯAದು ಪೂಜಾ ವಿಧಗಳನ್ನು ಮಾಡುವುದರಿಂದ ಜೀವನದ ಪ್ರತಿಯೊಂದು ಹಂತದಲ್ಲೂ ಪ್ರತಿಫಲವನ್ನು ಪಡೆಯಬಹುದು ಎಂದು ನುಡಿದರು.
ಕಾರ್ಯಕ್ರಮದಲ್ಲಿ ಬ್ರಾಹ್ಮಣ ಸಮಾಜದ ತಾಲೂಕಾಧ್ಯಕ್ಷ ಕೃಷ್ಣ ಕುಲಕರ್ಣಿ, ಕಾರ್ಯದರ್ಶಿ ಅರವಿಂದ ದೇಶಪಾಂಡೆ, ನಾರಾಯಣಭಟ್ ಪುರಾಣಿಕ, ಆರ್.ಎನ್. ಪಂಚಬಾವಿ, ದೃವ ಬೆಟಗೇರಿ, ಕೆ.ಎಸ್. ಕುಲಕರ್ಣಿ, ಅನಂತ ತೇಲಂಗ, ಕೃಷ್ಣಕುಮಾರ ಕುಲಕರ್ಣಿ, ಡಾ. ಪ್ರಸನ್ನ ಕುಲಕರ್ಣಿ, ಅನೂಜಾ ಪೂಜಾರ, ಮೀನಾಕ್ಷಿ ಸರದೇಶಪಾಂಡೆ, ವೀಣಾ ಪಡ್ನೀಸ್, ಮೇಘಾ ಸಾಹುಕಾರ, ಗಿರಿಜಾಬಾಯಿ ಕುಲಕರ್ಣಿ, ಕಮಲಾಬಾಯಿ ಪುರಾಣಿಕ, ಗೀತಾಬಾಯಿ ದೇಶಪಾಂಡೆ, ರಾಧಾ ಕುಲಕರ್ಣಿ, ಅಕ್ಷತಾ ಕುಲಕರ್ಣಿ, ಸೀಮಂತಿನಿ ಕುಲಕರ್ಣಿ, ನಯನಾ ಪೂಜಾರ, ಅಂಭುಜಾ ಬೆಟಗೇರಿ ಸೇರಿದಂತೆ ಅನೇಕರಿದ್ದರು.
ಬ್ರಾಹ್ಮಣ ಸಮಾಜದ ಹಿರಿಯ ಮುಖಂಡ ವಿ.ಎಲ್. ಪೂಜಾರ ಮತ್ತು ಬ್ರಹ್ಮವೃಂದದ ಅಧ್ಯಕ್ಷ ಗೋಪಾಲ ಪಡ್ನೀಸ್ ಮಾತನಾಡಿ, ದತ್ತಜಯಂತಿ ಕಾರ್ಯಕ್ರಮವು ಶ್ರೀಮಠದಲ್ಲಿ ಹಲವಾರು ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬರುತ್ತಿದ್ದು, ಹಿಂದಿನ ದಿನಗಳಲ್ಲಿ ಹಿರಿಯರು ದತ್ತಜಯಂತಿ ಪರಂಪರೆಯನ್ನು ಇಲ್ಲಿನ ಮಠದಲ್ಲಿ ಸಂಪ್ರದಾಯಬದ್ಧವಾಗಿ ಮಾಡುತ್ತಿದ್ದರು. ಅದನ್ನೇ ಈಗಲೂ ವ್ಯವಸ್ಥಿತವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಸಮಾಜ ಬಾಂಧವರೊAದಿಗೆ ಇತರೆ ಸಮಾಜದವರು ಸಹ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಕಾರ್ಯಕ್ರಮಗಳ ಯಶಸ್ವಿಗೆ ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.



