HomePolitics Newsಅಮಿತ್ ಶಾ ಮಾತಿನಿಂದ ಕೆಲವರಿಗೆ ಅಪಮಾನವಾಗಿದೆ, ನನಗೂ ಗೊತ್ತು: ಛಲವಾದಿ ನಾರಾಯಣಸ್ವಾಮಿ!

ಅಮಿತ್ ಶಾ ಮಾತಿನಿಂದ ಕೆಲವರಿಗೆ ಅಪಮಾನವಾಗಿದೆ, ನನಗೂ ಗೊತ್ತು: ಛಲವಾದಿ ನಾರಾಯಣಸ್ವಾಮಿ!

For Dai;y Updates Join Our whatsapp Group

Spread the love

ಬೆಂಗಳೂರು:- ಅಂಬೇಡ್ಕರ್ ಕುರಿತ ಅಮಿತ್ ಶಾ ಮಾತಿನಿಂದ ಕೆಲವರಿಗೆ ಅಪಮಾನವಾಗಿದೆ. ಅದು ನನಗೂ ಗೊತ್ತಿದೆ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.

ವಿಧಾನಸೌಧದಲ್ಲಿ ಮಾತಾಡಿದ ಅವರು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ವಿರುದ್ಧವಾಗಿ ಕಾಂಗ್ರೆಸ್ ಬೆಂಬಲಿತ ಕೆಲವು ಸಂಘಟನೆಗಳು, ಕಾಂಗ್ರೆಸ್ ಪ್ರೇರಣೆಯಿಂದ ಹಾಗೂ ಕಾಂಗ್ರೆಸ್ ಕೂಡ ಬೀದಿಗಿಳಿದು ಅವರ ಹೇಳಿಕೆಯನ್ನು ವಿರೋಧಿಸುತ್ತಿವೆ ಎಂದರು.

ಕೇಳಿದ್ದು ಸುಳ್ಳಾಗಬಹುದು, ನೋಡಿದ್ದು ಸುಳ್ಳಾಗಬಹುದು. ನಿಧಾನಿಸಿ ಯೋಚಿಸಿದಾಗ ನಿಜವು ತಿಳಿವುದು ಎಂದು ಹಾಡು ಕೇಳಿದ್ದೇವೆ. ಇದನ್ನು ಹೋರಾಟಗಾರರು ಅರ್ಥ ಮಾಡಿಕೊಳ್ಳಬೇಕು ಎಂದ ಅವರು ಈ ಹೋರಾಟಗಾರರಿಗೆ ಅರ್ಥವಾದ ಸತ್ಯಾಂಶ ಏನು ಎಂದು ಪ್ರಶ್ನಿಸಿದರು.

ಅಮಿತ್ ಶಾ ಅವರ ಮಾತಿನಿಂದ ಕೆಲವರಿಗೆ ಅಪಮಾನವಾಗಿದೆ. ನನಗೂ ಅದು ಗೊತ್ತಿದೆ. ಕಾಂಗ್ರೆಸ್ ಪಕ್ಷವು ಅಂಬೇಡ್ಕರ್‌ ಜೀವಿತಾವಧಿಯಿಂದ ಇಲ್ಲಿಯವರೆಗೆ ಅವರ ವಿರುದ್ಧವಾಗಿ ನಡೆದುಕೊಂಡ ವಿಷಯವನ್ನು ಸಂಪೂರ್ಣವಾಗಿ ವಿವರಿಸಿದ್ದರಿಂದ ಕಾಂಗ್ರೆಸ್ಸಿಗೆ ಮುಜುಗರವಾಗಿದೆ ಎಂದು ಹೇಳಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!