ವಿಜಯಸಾಕ್ಷಿ ಸುದ್ದಿ, ಗದಗ: ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯ ವಾರ್ಡ್ ನಂ. 5ರ ನರಸಾಪೂರ ಆಶ್ರಯ ಕಾಲೋನಿಯಲ್ಲಿ ಕಳೆದ 15 ದಿನಗಳಿಂದ ನೀರಿಲ್ಲದೆ ಜನರ ಬದುಕು ಅತಂತ್ರವಾಗಿದೆ. ಬಡವರ ಗೋಳು ಕೇಳುವವರು ಯಾರು ಎಂಬಂತೆ ಸಂಬಂಧಿಸಿದಇಲಾಖೆಯವರಿಗೆ ಕೇಳಿದರೆ ಉಡಾಫೆಯ ಉತ್ತರ ನೀಡುತ್ತಿದ್ದಾರೆ. ಪ್ರತಿನಿತ್ಯ ಒಂದಿಲ್ಲೊಂದು ನೆಪ ಹೇಳುತ್ತ ಜನರ ಬದುಕಿನ ಜೊತೆ ಆಟ ಆಡುತ್ತಿರುವ ನಗರಸಭೆಗೆ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ. ನರಸಾಪೂರ ಕಾಲೋನಿಯಲ್ಲಿ ಕೂಲಿ ಕಾರ್ಮಿಕರು ಹೆಚ್ಚಾಗಿದ್ದು, ಟ್ಯಾಂಕರ್ ಮೂಲಕವಾದರೂ ನೀರು ಪೂರೈಸಲು ಬಡಾವಣೆಯ ಯುವ ಮುಖಂಡ ಶಾಕೀರ ಕಾತರಕಿ ನೇತೃತ್ವದಲ್ಲಿ ಒತ್ತಾಯಿಸಿದರು
ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಸಂಗಮೇಶ ಹಾದಿಮನಿ, ನಾಗರಾಜ ಮುಳ್ಳಾಳ, ಇರ್ಫಾನ ಡಂಬಳ, ಖಲೀಮ್ ಈಟಿ, ಇಮ್ತಿಯಾಜ್ ಕರಡಿ, ರಿಯಾಜ್ ದಾಯಮ್ಮನವರ, ನಾಸೀರ ಮಕಾನದಾರ, ಲಿಯಾಖತ್ ಮುಲ್ಲಾ, ರಾಜು ಹಣಗಿ ಮುಂತಾದವರಿದ್ದರು.



