ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ನಿತ್ಯ ಜೀವನದಲ್ಲಿ ಅಂಕಿ-ಸAಖ್ಯೆಗಳಿದಲ್ಲದೆ ಬದುಕಿಲ್ಲ. ಕೇವಲ ವರ್ಗಕೋಣೆಯಲ್ಲಿನ ಗಣಿತ ಕಲಿಕೆಗೆ ಸೀಮಿತವಾಗದೆ ಜೀವನದ ಪ್ರತಿ ಕ್ಷಣದಲ್ಲೂ ಗಣಿತ ಅಡಗಿದೆ ಎಂಬುದನ್ನು ನೀವು ಅರಿಯಬೇಕು ಎಂದು ಎಸ್ಎವಿವಿಪಿ ಸಮಿತಿಯ ಆಡಳಿತಾಧಿಕಾರಿ ಎನ್.ಆರ್. ಗೌಡರ ಹೇಳಿದರು.
ಸಮೀಪದ ನಿಡಗುಂದಿಯ ಶ್ರೀ ಅನ್ನದಾನೇಶ್ವರ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ರಾಷ್ಟಿçÃಯ ಗಣಿತ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗಣಿತವನ್ನು ಕಬ್ಬಿಣದ ಕಡಲೆ ಎನ್ನುವದು ತಪ್ಪು. ಆಸಕ್ತಿಯಿಂದ ಅಧ್ಯಯನ ಮಾಡಿದಾಗ ಯಾವುದೇ ವಿಷಯ ಕಷ್ಟವಲ್ಲ. ಮಕ್ಕಳು ಮೊಬೈಲ್ ಗೀಳಿನಿಂದ ದೂರವಿದ್ದು ಕಲಿಕೆಯತ್ತ ಗಮನ ಹರಿಸಿದಾಗ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯ ಎಂದರು.
ಕೆವಿಬಿಎA ಉಚಿತ ಪ್ರಸಾದ ನಿಲಯದ ಚೇರಮನ್ ಮಲ್ಲಿಕಾರ್ಜುನ ಮೆಣಸಗಿ ಮಾತನಾಡಿ, ಮಕ್ಕಳಿಗೆ ಬಾಲ್ಯದಿಂದಲೇ ಸಂಸ್ಕಾರ ಮತ್ತು ಸಂಸ್ಕೃತಿಯ ಬಗ್ಗೆ ತಿಳುವಳಿಕೆ ನೀಡುವ ಕಾರ್ಯವಾಗಬೇಕು. ತಂದೆ-ತಾಯಿ, ಗುರುಗಳ ಪರಿಶ್ರಮ ಸಾರ್ಥಕವಾಗಬೇಕಾದರೆ ವಿದ್ಯಾರ್ಥಿಗಳು ಅಧ್ಯಯನಶೀಲತೆಯನ್ನು ಮೈಗೂಡಿಸಿಕೊಳ್ಳಬೇಕು. ಲಭ್ಯ ಪರಿಕರ ಬಳಸಿ, ಮೊಬೈಲ್ ದೂರ ಸರಿಸಿ ಉನ್ನತ ಗಣಿತ ಅಧ್ಯಯನ ಮಾಡಬೇಕು ಎಂದರು.
ವಿದ್ಯಾರ್ಥಿಗಳಿಗೆ ಮಗ್ಗಿ ಸ್ಪರ್ಧೆ, ಸೂತ್ರ ಹೇಳುವ ಸ್ಪರ್ಧೆ, ಗಣಿತದ ಒಗಟುಗಳ ಸ್ಪರ್ದೆಗಳನ್ನು ನಡೆಸಲಾಯಿತು. ಶಾಲಾ ಆಡಳಿತ ಮಂಡಳಿ ಚೇರಮನ್ ಜಗದೀಶ ಕರಡಿ, ಮುಖ್ಯ ಶಿಕ್ಷಕ ಕೆ.ಪಿ. ರಾಠೋಡ, ಎಸ್.ಐ. ದಿಂಡೂರ, ಎಂ.ಬಿ. ಕೊಪ್ಪದ, ಎಚ್.ಬಿ. ಕಟ್ಟಿಮನಿ, ಗಣಿತ ಶಿಕ್ಷಕ ಎಸ್.ವಿ. ಹಳ್ಳಿಕೇರಿ, ಕೆ.ಬಿ. ಗಡಾದ, ಎಸ್.ಬಿ. ಹಿರೇಮಠ, ಎಸ್.ಬಿ. ಅಳೆಹೊನ್ನಪ್ಪನವರ, ವಿ.ಎಸ್. ಅರಮನಿ ಇದ್ದರು.



