HomeKarnataka Newsಕಲಬುರ್ಗಿಯಲ್ಲಿ ಜೋರಾಯ್ತು ತಲವಾರ್ ಪಾಲಿಟಿಕ್ಸ್: ಕಮಲ, "ಕೈ" ನಾಯಕರ ಆರೋಪ-ಪ್ರತ್ಯಾರೋಪ!

ಕಲಬುರ್ಗಿಯಲ್ಲಿ ಜೋರಾಯ್ತು ತಲವಾರ್ ಪಾಲಿಟಿಕ್ಸ್: ಕಮಲ, “ಕೈ” ನಾಯಕರ ಆರೋಪ-ಪ್ರತ್ಯಾರೋಪ!

For Dai;y Updates Join Our whatsapp Group

Spread the love

ಕಲಬುರಗಿ:- ಕಲಬುರಗಿಯಲ್ಲಿ ತಲವಾರ್ ಪಾಲಿಟಿಕ್ಸ್ ಜೋರಾಗಿದ್ದು, ಆರೋಪ-ಪ್ರತ್ಯಾರೋಪದಲ್ಲಿ ಅಡಳಿತ ಹಾಗೂ ವಿಪಕ್ಷ ನಾಯಕರು ಮುಳುಗಿದ್ದಾರೆ.

ನಿನ್ನೆ ತಾನೇ ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿರುವ ಬಿಜೆಪಿಗೆ ಪ್ರಿಯಾಂಕ್ ಖರ್ಗೆ ತಿರುಗೇಟು ಕೊಟ್ಟಿದ್ದರು. ತಮ್ಮ ಎಕ್ಸ್‌ ಖಾತೆಯಲ್ಲಿ ವೀಡಿಯೋವೊಂದನ್ನು ಹಂಚಿಕೊಂಡಿದ್ದ ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ವಿರುದ್ಧ ಕಿಡಿ ಕಾರಿದ್ದರು.

ಬಿಜೆಪಿಯ ಮಾಜಿ ಶಾಸಕ ರಾಜ್‌ ಕುಮಾರ್ ಪಾಟೀಲ್ ತೇಲ್ಕೂರ್ ಅವರ ಸಹೋದರ ಜಿಬಿ ಪಾಟೀಲ್ ಅವರು ತಲ್ವಾರ್‌ನಿಂದ ಕೇಕ್ ಕತ್ತರಿಸಿದ ವಿಡಿಯೋ ಹಂಚಿಕೊಂಡ ಖರ್ಗೆ ಅವರು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ಬಿಜೆಪಿಯ ಮಾಜಿ ಶಾಸಕ ರಾಜ್‌ ಕುಮಾರ್‌ ಪಾಟೀಲ್ ತೇಲ್ಕೂರ್ ಅವರ ಸಹೋದರ ಜಿಬಿ ಪಾಟೀಲ್ ಅವರು ತಲ್ವಾರ್‌ನಿಂದ ಕೇಕ್‌ ಕತ್ತರಿಸಿ ವಿಜೃಂಭಣೆ ನಡೆಸಿದ್ದಾರೆ. ಇದು ”ಕಲಬುರಗಿ ರಿಪಬ್ಲಿಕ್” ಮಾಡುವ ಪ್ರಯತ್ನವೇ? ಬಿಜೆಪಿಗರ ಪ್ರಚಾರ ಇದು ಗೂಂಡಾಗಿರಿಯ ವ್ಯಾಪ್ತಿಗೆ ಬರುವುದಿಲ್ಲವೇ? ಎಂದು ಪ್ರಶ್ನೆ ಮಾಡಿದ್ದರು.

ಡಾ ಅಂಬೇಡ್ಕರ್‌ ಅವರ ಫೋಟೋ ಕಾಲ ಕೆಳಗಿಟ್ಟುಕೊಂಡು ತಲ್ವಾರ್‌ ಹಿಡಿದು ಕೇಕೆ ಹಾಕುತ್ತಿರುವ ಬಿಜೆಪಿಗರು ಗೂಂಡಾಗಿರಿ ಪ್ರದರ್ಶಿಸಿರುವುದಲ್ಲದೆ ಬಾಬಾ ಸಾಹೇಬರ ಘನತೆಗೆ ಚ್ಯುತಿ ತಂದಿದ್ದಾರೆ. ಈ ಕೃತ್ಯಕ್ಕೆ ಬಿಜೆಪಿಯವರು ಸಮರ್ಥನೆ ಮಾಡಿಕೊಳ್ಳುತ್ತಾರಾ ಅಥವಾ ಇಂತಹ ಘೋರ ಅಪರಾಧ ಮಾಡಿದವರ ವಿರುದ್ಧ ಕ್ರಮ ಜರುಗಿಸುತ್ತಾರಾ?’ ಎಂದು ಪ್ರಿಯಾಂಕ್‌ ಖರ್ಗೆ ಪ್ರಶ್ನಿಸಿದ್ದರು.

ಅಷ್ಟೇ ಯಾಕೆ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಹಾಗೂ ವಿಜಯೇಂದ್ರ ಅವರೇ ಯಾವಾಗ ಕಲಬುರ್ಗಿಗೆ ಬರುತ್ತೀರಿ ಎಂದು ಟ್ವೀಟ್ ಮೂಲಕ ಕಾಲೆಳೆದಿದ್ದರು.

ಇದೀಗ ಪ್ರಿಯಾಂಕ್‌ ಖರ್ಗೆಗೆ ಬಿಜೆಪಿ ಮಾಜಿ ಶಾಸಕ ರಾಜಕುಮಾರ್ ತಿರುಗೇಟು ಕೊಟ್ಟಿದ್ದಾರೆ. ಪ್ರಿಯಾಂಕ ಖರ್ಗೆ ತಲ್ವಾರ್ ಹಿಡಿದ ಫೋಟೋ ರಿಲೀಸ್ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ.

ಹೇಳುವುದು ಆಚಾರ ತಿನ್ನುವದು ಬದನೆಕಾಯಿ, ಇವರು ಏನು ಮಾಡಿದ್ರು ನಡೆಯುತ್ತೆ. ಬೇರೆಯವರು ಮಾಡಿದ್ರೆ ಮಾತ್ರ ಸಂವಿಧಾನ, ಕಾನೂನು ಅಂತಾ ಬೊಗಳೆ ಬಿಡೋದು ಎಂದು ಹೇಳುವ ಮೂಲಕ ಸಚಿವ ಪ್ರಿಯಾಂಕ ಹಾಗೂ ಅಜಯ್ ಸಿಂಗ್ ತಲ್ವಾರ್ ಫೋಟೋ ರಿಲೀಸ್ ಮಾಡಿ ಬಿಜೆಪಿ ಆಕ್ರೋಶ ಹೊರ ಹಾಕಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!