ಪ್ರಯಾಣಿಕರಿಗೆ ಬಿಗ್ ಶಾಕ್ ಕೊಟ್ಟ ಸಾರಿಗೆ ಇಲಾಖೆ: ಬಿಎಂಟಿಸಿ ಪಾಸ್‌ಗಳ ದರ ಏರಿಕೆ!

0
Spread the love

ಬೆಂಗಳೂರು: ಕಾಂಗ್ರೆಸ್ ಸರ್ಕಾರವು ರಾಜ್ಯದ ಜನರಿಗೆ ಇತ್ತೀಚೆಗೆ ಬಸ್ ಟಿಕೆಟ್​ ದರ ಏರಿಕೆ ಮಾಡಿ ಶಾಕ್ ಕೊಟ್ಟಿತ್ತು. ಸಾರಿಗೆ ಇಲಾಖೆ ಕೆಎಸ್​ಆರ್​ಟಿಸಿ, ಬಿಎಂಟಿಸಿ, ಎನ್​ಡಬ್ಲೂಕೆಆರ್​ಟಿಸಿ, ಕೆಕೆಆರ್​ಟಿಸಿ ಬಸ್​ಗಳ ಟಿಕೆಟ್ ದರ ಪರಿಷ್ಕರಣೆ ಮಾಡಿ ಶೇ 15 ರಷ್ಟು ದರ ಹೆಚ್ಚು ಮಾಡಿತ್ತು.

Advertisement

ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ ಪ್ರಯಾಣ ಟಿಕೆಟ್ ದರ ಏರಿಕೆ ಬೆನ್ನಲ್ಲೇ ಇದೀಗ ಬಿಎಂಟಿಸಿ ಪಾಸ್‌ಗಳ ದರದಲ್ಲಿ ಏರಿಕೆಯಾಗಿದೆ.

ನಾಳೆಯಿಂದಲೇ ಬಿಎಂಟಿಸಿ ಪಾಸ್‌ಗಳ ದರ ಏರಿಕೆ ಆಗಲಿದೆ. ಹಳೆಯ ಪಾಸ್ ದರವನ್ನು ಪರಿಷ್ಕರಿಸಿ ಹೊಸ ದರ ಕುರಿತು ಪ್ರಕಟಣೆ ಹೊರಡಿಸಲಾಗಿದೆ.

ಬಿಎಂಟಿಸಿ ಡೈಲಿ ಪಾಸ್ – 70 ರೂ. (ಹಳೆಯ ದರ), 80 ರೂ. (ಹೊಸ ದರ)
ಬಿಎಂಟಿಸಿ ವಾರದ ಪಾಸ್ – 300 ರೂ. (ಹಳೆಯ ದರ), 350 ರೂ. (ಹೊಸ ದರ)
ಹಿರಿಯ ನಾಗರಿಕರ ಮಾಸಿಕ ಪಾಸ್ – 945 ರೂ. (ಹಳೆಯ ದರ), 1,080 ರೂ. (ಹೊಸ ದರ)
ಸಾಮಾನ್ಯ ಮಾಸಿಕ ಪಾಸ್ – 1,050 ರೂ. (ಹಳೆಯ ದರ), 1,200 ರೂ. (ಹೊಸ ದರ)
ನೈಸ್ ರೋಡ್ ಮಾಸಿಕ ಪಾಸ್ – 2,200 ರೂ. (ಹಳೆಯ ದರ), 2,350 ರೂ. (ಹೊಸ ದರ).


Spread the love

LEAVE A REPLY

Please enter your comment!
Please enter your name here