ವಿಜಯಸಾಕ್ಷಿ ಸುದ್ದಿ, ಮುಳಗುಂದ: ಪಟ್ಟಣದ ವಿದ್ಯಾನಗರದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ವಿಜ್ಞಾನ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು. 1ರಿಂದ 5ನೇ ತರಗತಿಯ ಮಕ್ಕಳು ಮನೆಯಲ್ಲಿ ಹಿಂದೆ ಉಪಯೋಗಿಸುತ್ತಿದ್ದ ವಸ್ತುಗಳ ಪ್ರದರ್ಶನ ಮಾಡಿದರು. ವೀಕ್ಷಕರಿಗೆ ಅದರ ಬಗ್ಗೆ ಸಂಪೂರ್ಣ ವಿವರಣೆಯನ್ನು ನೀಡಿದರು.
ಎಸ್‌ಡಿಎಂಸಿ ಅಧ್ಯಕ್ಷರಾದ ರಹಮತಬಿ ಹಾದಿಮನಿ, ಉಪಾಧ್ಯಕ್ಷ ಚಂದ್ರಶೇಖರ ಸಾಠೆ ಹಾಗೂ ಸದಸ್ಯರು, ಮುಳಗುಂದ ಕ್ಲಸ್ಟರನ ಎಲ್ಲ ಶಾಲೆಗಳ ಮಕ್ಕಳು ಪ್ರದರ್ಶನ ವೀಕ್ಷಿಸಿದರು. ಸದಸ್ಯರು, ಸಿಆರ್‌ಪಿ ಎಂ.ಎಂ. ನಿಂಬನಾಯ್ಕರ, ಶಿಕ್ಷಕರಾದ ಎಚ್.ಟಿ. ಕಟ್ಟಿಮನಿ, ಆರ್.ಸೈದಾಪೂರ, ಎಂ.ಎಂ. ಮೇಗಿಲಮನಿ, ವೆಂಕಟೇಶ ಕರಿಗಾರ, ಎಸ್.ಬಿ. ಪಾಟೀಲ, ಮಾಹಾಮತೇಶ ಕೆಂಚನಾಯ್ಕರ್ ಇತರರು ಪ್ರದರ್ಶನ ವೀಕ್ಷಿಸಿ ಮಕ್ಕಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.



