HomePolitics Newsಹೆಬ್ಬಾಳ್ಕರ್ ಕಾಲು ಹಿಡಿದು ಕ್ಷಮೆ ಕೇಳದಿದ್ರೆ ಹತ್ಯೆ ಗ್ಯಾರಂಟಿ: CT ರವಿಗೆ ಬೆದರಿಕೆ ಪತ್ರ ಬಂದದ್ದು...

ಹೆಬ್ಬಾಳ್ಕರ್ ಕಾಲು ಹಿಡಿದು ಕ್ಷಮೆ ಕೇಳದಿದ್ರೆ ಹತ್ಯೆ ಗ್ಯಾರಂಟಿ: CT ರವಿಗೆ ಬೆದರಿಕೆ ಪತ್ರ ಬಂದದ್ದು ಎಲ್ಲಿಂದ?

For Dai;y Updates Join Our whatsapp Group

ಚಿಕ್ಕಮಗಳೂರು:- ಸದನದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಬಿಜೆಪಿ MLC ಸಿ.ಟಿ ರವಿ ಅವರು ಬಳಸಿರುವ ಪದ ಬಳಕೆ ರಾಜ್ಯ ರಾಜಕಾರಣದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ಇದೀಗ ಸಿ.ಟಿ ರವಿ ಅವರ ಚಿಕ್ಕಮಗಳೂರು ನಗರದ ಬಸವನಹಳ್ಳಿ ನಿವಾಸಕ್ಕೆ ಅನಾಮಧೇಯ ಪತ್ರ ಬಂದಿದೆ. ಪತ್ರದಲ್ಲಿ ಹೆಬ್ಬಾಳ್ಕರ್ ಗೆ 15 ದಿನದೊಳಗೆ ಕಾಲು‌ಹಿಡಿದು ಕ್ಷಮೆ ಕೇಳ್ಬೇಕು. ಇಲ್ಲ ಮಗ ಸೂರ್ಯ ಸೇರಿದಂತೆ ರವಿಯನ್ನ ಹತ್ಯೆ ಮಾಡುವುದಾಗಿ ಪತ್ರ ಬಂದಿದ್ದು, ಈ ಬಗ್ಗೆ ಸಿ.ಟಿ ರವಿ ಪಿಎ ಚೇತನ್ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಈ ದೂರಿನ ಮೇರೆಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಚಿಕ್ಕಮಗಳೂರಿನ ವಿಜಯಪುರದ ಅಂಚೆ ಕಚೇರಿಯಿಂದ ಪತ್ರ ರವಾನೆಯಾಗಿರುವುದು ಬೆಳಕಿಗೆ ಬಂದಿದೆ.

ಜನವರಿ 9ರಂದು ಚಿಕ್ಕಮಗಳೂರಿನ ಬಸವನಹಳ್ಳಿ ರಸ್ತೆಯಲ್ಲಿರುವ ಸಿ.ಟಿ.ರವಿ ಮನೆಗೆ ಬೆದರಿಕೆ ಪತ್ರ ಬಂದಿದ್ದು, ಅದು ಸಿಟಿ ರವಿ ಅವರ ತವರು ಕ್ಷೇತ್ರ ಚಿಕ್ಕಮಗಳೂರಿನ ವಿಜಯಪುರದ ಅಂಚೆ ಕಚೇರಿಯಿಂದ ಬಂದಿರುವುದು ಕಂಡುಬಂದಿದೆ. ಹೀಗಾಗಿ ಪೊಲೀಸರು, ಪತ್ರ ಕಳುಹಿಸಿದ ವ್ಯಕ್ತಿ ಯಾರು ಎನ್ನುವುದನ್ನು ಪತ್ತೆ ಮಾಡಲು ಪೋಸ್ಟ್ ಆಫೀಸ್ ಸುತ್ತಮುತ್ತಲಿನ ಸಿಸಿಕ್ಯಾಮರಾಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img