ಮಂಡ್ಯ : ಎರಡು ಬೈಕ್ ಗಳ ನಡುವೆ ಅಪಘಾತ ಸಂಭವಿಸಿ ಹಸೆಮಣೆ ಏರಬೇಕಿದ್ದ ಯುವತಿ ಸಾವನ್ನಪ್ಪಿರುವ ಘಟನೆ ಮಂಡ್ಯದ ಮಳವಳ್ಳಿಯ ಹೆಚ್ ಬಸಾಪುರ ಗೇಟ್ ಬಳಿ ನಡೆದಿದೆ. ಮಳವಳ್ಳಿಯ ಬಾಳೆಹೊನ್ನಿಗ ಗ್ರಾಮದ ಶರಣ್ಯ( 26) ಮೃತ ದುರ್ದೈವಿಯಾಗಿದ್ದು,
Advertisement
ನರೇಗಾ ಯೋಜನೆಯ ಇಂಜಿನಿಯರ್ ಆಗಿ ಕೆಲಸ ಮಾಡ್ತಿದ್ದ ಶರಣ್ಯ ಇನ್ನ 20 ದಿನಗಳಲ್ಲಿ ಹಸೆಮಣೆ ಏರಬೇಕಿದ್ದಳು ಎಂದು ತಿಳಿದು ಬಂದಿದೆ. ಇಂದು ಗ್ರಾಮದಿಂದ ಹಲಗೂರು ಕಡೆ ಹೊರಟಿದ್ದಳು ಈ ವೇಳೆ ಹಿಂಬದಿಯಿಂದ ಬಂದು ಮತ್ತೊಂದು ಬೈಕ್ ಡಿಕ್ಕಿ ಹೊಡೆದಿದೆ.
ಡಿಕ್ಕಿ ರಭಸಕ್ಕೆ ಶರಣ್ಯ ತಲೆಗೆ ತೀವ್ರ ಪೆಟ್ಟಾಗಿತ್ತು. ಹೀಗಾಗಿ ರಕ್ತ ಸ್ತ್ರಾವದಿಂದ ಸ್ಥಳದಲ್ಲೆ ಪ್ರಾಣಬಿಟ್ಟಿದ್ದಾಳೆ. ಸ್ಥಳಕ್ಕೆ ಹಲಗೂರು ಪೊಲೀಸರ ಭೇಟಿ, ಪರಿಶೀಲನೆ ನಡೆಸಿದ್ದು, ಹಲಗೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.