ಬಾಗಲಕೋಟೆ: ವಿಪರೀತ ಸಾಲಕ್ಕೆ ಬೇಸತ್ತು ಬ್ರಿಡ್ಜ್ ಗೆ ನೇಣು ಹಾಕಿಕೊಂಡು ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮುಧೋಳ ನಗರದಲ್ಲಿರುವ ಯಾದವಾಡದ ಘಟಪ್ರಭಾ ನದಿಗೆ ಅಡ್ಡಲಾಗಿ ಕಟ್ಟಿರುವ ಬ್ರಿಡ್ಜ್ʼ ಬಳಿ ನಡೆದಿದೆ.
ಮಲ್ಲಪ್ಪ ಲಾಳಿ (೫೬), ಮಹಾದೇವಿ (೫೧) ಆತ್ಮಹತ್ಯೆ ಮಾಡಿಕೊಂಡಿರುವ ದಂಪತಿಗಳಾಗಿದ್ದು, . ಮೆಟಗುಡ್ಡ ಗ್ರಾಮದಲ್ಲಿ ಕಿರಾಣಿ ಅಂಗಡಿ ನಡೆಸುತ್ತಿದ್ದರು. ಅತಿಯಾದ ಸಾಲವೇ ಆತ್ಮಹತ್ಯೆ ಕಾರಣ ಎನ್ನಲಾಗುತ್ತಿದೆ.
ಇಬ್ಬರು ಹೆಣ್ಣು ಮಕ್ಕಳ ಮದುವೆಗಾಗಿ ಖಾಸಗಿ ವ್ಯಕ್ತಿಗಳು, ಫೈನಾನ್ಸ್ ಗಳಲ್ಲಿ ಸಾಲ ಮಾಡಿದ್ದರು. ಆದರೆ ಸಾಲ ತೀರಿಸಲಾಗದೇ ಸ್ಥಳದಲ್ಲಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಲೋಕಾಪುರ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.



