HomeKarnataka Newsಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಇನ್ಮುಂದೆ ಕಪ್ಪು ಬಣ್ಣದ ಪೆನ್ ನಿಷೇಧ: KPSC ಆದೇಶ.!

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಇನ್ಮುಂದೆ ಕಪ್ಪು ಬಣ್ಣದ ಪೆನ್ ನಿಷೇಧ: KPSC ಆದೇಶ.!

For Dai;y Updates Join Our whatsapp Group

Spread the love

ಬೆಂಗಳೂರು:- ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನೀಲಿ ಬಣ್ಣದ ಬಾಲ್ ಪಾಯಿಂಟ್ ಪೆನ್ ಬಳಕೆ ಕಡ್ಡಾಯಗೊಳಿಸಿ KPSC ಆದೇಶ ಹೊರಡಿಸಿದೆ.

ಈವರೆಗಿನ ಪರೀಕ್ಷೆಗಳಲ್ಲಿ ಕಪ್ಪು ಬಣ್ಣದ ಬಾಲ್ ಪಾಯಿಂಟ್ ಪೆನ್‌ನಿಂದ ಪರೀಕ್ಷೆ ಬರೆಯಬೇಕು ಎಂದು ಅಭ್ಯರ್ಥಿಗಳಿಗೆ ಸೂಚಿಸಲಾಗುತ್ತಿತ್ತು. ಆದರೀಗ ಸೂಚನೆಯಲ್ಲಿ ಮಾರ್ಪಾಡು ಮಾಡಿ ಫೆ.16ರಿಂದ ಕೆಪಿಎಸ್‌ಸಿ ನಡೆಸುವ ಎಲ್ಲಾ ಪರೀಕ್ಷೆಗಳಲ್ಲಿ ಕಡ್ಡಾಯವಾಗಿ ನೀಲಿ ಬಣ್ಣದ ಪೆನ್ ಮಾತ್ರ ಬಳಸಬೇಕು ಎಂದು ಕೆಪಿಎಸ್‌ಸಿ ಪ್ರಕಟಣೆಯಲ್ಲಿ ತಿಳಿಸಿದೆ.

ಸಾಮಾನ್ಯವಾಗಿ ಬಹುತೇಕ ಎಲ್ಲೆಡೆ ನೀಲಿ ಪೆನ್ ಬಳಕೆಯಲ್ಲಿದೆ. ಆದರೆ, ಕೆಪಿಎಸ್‌ಸಿ ಪರೀಕ್ಷೆಗೆ ಮಾತ್ರ ಕಪ್ಪು ಬಣ್ಣದ ಪೆನ್ ಬಳಕೆಗೆ ನಿರ್ದೇಶನ ನೀಡುವುದರಿಂದ ಅಭ್ಯರ್ಥಿಗಳು ಅನಗತ್ಯವಾಗಿ ಗೊಂದಲಕ್ಕೆ ಒಳಗಾಗುತ್ತಾರೆ. ಅಲ್ಲದೇ, ಸೂಚನೆಯ ಹೊರತಾಗಿಯುವ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ನೀಲಿ ಸೇರಿದಂತೆ ಕಪ್ಪು ಹೊರತಾದ ಪೆನ್ ಬಳಸುತ್ತಿದ್ದಾರೆ. ಹೀಗಾಗಿ, ಆಯೋಗದ ಸದಸ್ಯರು ‘ಸಾಮಾನ್ಯವಾಗಿ ಬಳಕೆ’ಯಲ್ಲಿರುವ ನೀಲಿ ಪೆನ್ ಬಳಕೆಗೆ ಸಲಹೆ ನೀಡಿದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!