HomeGadag Newsಜಾತ್ರೆ ನೆಪದಲ್ಲಿ ಸಾಮಾಜಿಕ ಪರಿವರ್ತನೆ ಮಾಡಿ ಸಾಮರಸ್ಯದ ತೇರು ಎಳೆಯುತ್ತಿರುವ ತೋಂಟದ ಡಾ.ಸಿದ್ಧರಾಮ ಸ್ವಾಮೀಜಿ

ಜಾತ್ರೆ ನೆಪದಲ್ಲಿ ಸಾಮಾಜಿಕ ಪರಿವರ್ತನೆ ಮಾಡಿ ಸಾಮರಸ್ಯದ ತೇರು ಎಳೆಯುತ್ತಿರುವ ತೋಂಟದ ಡಾ.ಸಿದ್ಧರಾಮ ಸ್ವಾಮೀಜಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಡಂಬಳ: ಡಂಬಳದ ಶ್ರೀಮದರ್ಧನಾರೀಶ್ವರ ದೇವರ 285ನೇ ಜಾತ್ರಾ ಮಹೋತ್ಸವದ ರಥೋತ್ಸವವು ಫೆ.13 ಹಾಗೂ 14 ರಂದು ಲಘು ರಥೋತ್ಸವ ವಿಜ್ರಂಭಣೆಯಿಂದ ನಡೆಯಲಿದೆ.

ಮೌಢ್ಯ, ಅಂಧಕಾರದಲ್ಲಿ ಮುಳಗಿ ಅಜ್ಞಾನದ ಮಡುವಿನಲ್ಲಿರುವ ಸಮಾಜದ ಕೊಳೆ ತೊಳೆಯುವ ನಿಟ್ಟಿನಲ್ಲಿ ತೋಂಟದ ಡಾ. ಸಿದ್ದಲಿಂಗ ಸ್ವಾಮೀಜಿಗಳ ನಂತರ ತೋಂಟದ ಡಾ. ಸಿದ್ಧರಾಮ ಸ್ವಾಮೀಜಿ ಅವರು ಜಾತ್ರೆಗೆ ಹೊಸ ಮೆರಗು ನೀಡುವ ನಿಟ್ಟಿನಲ್ಲಿ ವೈಚಾರಿಕತೆ ತೇರು ಎಳೆಯಲು ಭಕ್ತರಿಗೆ ಅನುಕೂಲ ಕಲ್ಪಿಸಿದ್ದಾರೆ.

ರಾಷ್ಟ್ರೀಯ ಮಟ್ಟದಲ್ಲಿ ಕೋಮು ಸೌಹಾರ್ದತೆ ಮೆರೆದಿರುವ ಎಡೆಯೂರ-ಡಂಬಳ-ಗದಗ ತೋಂಟದಾರ್ಯ ಮಠವನ್ನು ಲಿಂ. ಡಾ. ಸಿದ್ದಲಿಂಗ ಸ್ವಾಮೀಜಿಯವರ ಮಠ ಎಂಬ ಪರಿಕಲ್ಪನೆಗೆ ಹೊಸ ಭಾಷ್ಯ ಬರೆದಿದ್ದರು. ನಂತರ ಜಗದ್ಗುರು ಡಾ.ಸಿದ್ದರಾಮ ಮಹಾಸ್ವಾಮಿಗಳು ಇಂಗ್ಲಿಷೇತರ ಭಾಷೆಗಳಿಂದ ಕನ್ನಡಕ್ಕೆ ಅನುವಾದನೆ ಮಾಡಿರುವ ಕೃತಿಯಾಗಿರುವ ತೌಲನಿಕ ಧರ್ಮದರ್ಶನ ಅನುವಾದ ಮಾಡವುದರ ಮೂಲಕ ಕುವೆಂಪು ಭಾಷಾ ಭಾರತಿ ಗೌರವ ಪ್ರಶಸ್ತಿಗೆ ಭಾಜಿನರಾಗಿರುವ ಡಾ. ತೋಂಟದ ಸಿದ್ದರಾಮ ಶ್ರೀಗಳು ಮಠಗಳು ಸಾಮಾನ್ಯರ ನೋವು-ನಲಿವುಗಳಿಗೆ ಸ್ಪಂದಿಸಬೇಕು. ದೇಶಕ್ಕೆ ಬಡತನ, ನಿರುದ್ಯೋಗ, ಮತೀಯ ಗಲಭೆಗಳು, ಭಾಷೆ-ಗಡಿ ಸಮಸ್ಯೆಗಳು ಏಕತೆಗೆ ಧಕ್ಕೆ ತರುತ್ತವೆ ಎಂದು ಅರಿತು ಜಾತ್ರೆಗಳಲ್ಲಿ ಸಾಹಿತ್ಯ ಸಮ್ಮೇಳನ, ವಿಚಾರಗೋಷ್ಠಿ, ಉಪನ್ಯಾಸ, ಸಾಂಸ್ಕೃತಿಕ ಕಾರ್ಯಗಳ ಮೂಲಕ ಜನತೆಯಲ್ಲಿ ಸಮಗ್ರತೆ ಕಾಪಾಡುವ ಕೈಂಕರ್ಯದಲ್ಲಿ ತೋಂಟದಾರ್ಯ ಮಠ ತೊಡಗಿಸಿಕೊಂಡಿದೆ.

ಲಿಂ. ಡಾ. ಸಿದ್ಧಲಿಂಗ ಶ್ರೀಗಳಂತೆ ತೋಂಟದ ಡಾ. ಸಿದ್ದರಾಮ ಶ್ರೀ ಪೀಠಾರೋಹಣ ಮಾಡಿದ ನಂತರ ಬಸವಣ್ಣವರ ಸಮಾನತೆಯ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಅಡ್ಡಪಲ್ಲಕ್ಕಿಯಲ್ಲಿ ಸ್ವಾಮಿಗಳು ಮೆರೆಯಬಾರದು, ಮನುಷ್ಯರನ್ನು ಮನುಷ್ಯರು ಹೊರುವುದು ಹೀನ ಕೆಲಸ ಎಂದು ಪಲ್ಲಕ್ಕಿ ತ್ಯಾಗ ಮಾಡಿ, ಪಲ್ಲಕ್ಕಿ ಮುಂದೆ ಪಾದಚಾರಿಗಳಾಗಿ ಸಾಮಾನ್ಯ ಭಕ್ತರ ಮಧ್ಯೆ ಹೋಗುತ್ತಿದ್ದಾರೆ.

ಮೌಢ್ಯ, ಕಂದಾಚಾರ, ಸಮಾಜದ ಅವನತಿಗೆ ಕಾರಣ ಎಂದು ಮನಗಂಡು ಶಿಕ್ಷಣ, ಆರೋಗ್ಯ, ಪರಿಸರ, ನಾಡು ನುಡಿ ಪುಸ್ತಕ ಪ್ರಕಟಣೆ ಅನ್ನದಾಸೋಹ ಸೇರಿದಂತೆ ಜನಪರ ಕಾರ್ಯ ಕೈಗೊಂಡು ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸು ಎಂಬ ಬಸವಣ್ಣವರ ವಾಣಿಯನ್ನು ಸಾಕಾರಗೊಳಿಸಲು ಲಿಂ. ಡಾ. ಸಿದ್ಧಲಿಂಗ ಶ್ರೀಗಳಂತೆ ಸಿದ್ಧರಾಮ ಸ್ವಾಮೀಜಿಯವರು ಕೂಡಾ ಶಿವಾನುಭವ ಕಾರ್ಯಕ್ರಮಗಳ ಮೂಲಕ ಸಾಹಿತಿಗಳಿಗೆ, ಕಲಾವಿದರಿಗೆ, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಗೌರವಿಸಿ ಬಸವಣ್ಣವರ ಅನುಭವ ಮಂಟಪದ ಸವಿ ಸಂಭ್ರಮಕ್ಕೆ ಮುನ್ನುಡಿ ಬರೆಯುತ್ತಿದ್ದಾರೆ.

ಜಾತಿ, ಮತ, ಪಂಥ ಬೇಧ-ಭಾವ ತೊರೆಯುವ ನಿಟ್ಟಿನಲ್ಲಿ ಮಠಗಳಲ್ಲಿ ಮಹಾತ್ಮರ, ದಾರ್ಶನಿಕರ, ಸಂತರ, ಆದರ್ಶ ಮೌಲ್ಯಗಳನ್ನು ಶಿವಾನುಭಗಳಲ್ಲಿ ನೆನೆದು ಭಕ್ತರ ನೆತ್ತಿಗೆ ಜ್ಞಾನದ ಬುತ್ತಿ ತುಂಬಿ ಮಠಗಳಲ್ಲಿ ಬುದ್ದ, ಮಹಾವೀರ, ಅಂಬೇಡ್ಕರ್, ಕನಕದಾಸರು, ಮಡಿವಾಳ ಮಾಚಿದೇವ, ವಿವೇಕಾನಂದರು ಸೇರಿದಂತೆ ಮಹಾತ್ಮರ ವಿಚಾರಧಾರೆಗಳನ್ನು ನವ ಸಮಾಜಕ್ಕೆ ತಿಳಿಸುವ ಕೆಲಸ ನಿರಂತರವಾಗಿ ಮಾಡುತ್ತಿದ್ದಾರೆ.

ಜಾತ್ರೆಯ ವಿಶೇಷ

ಫೆ.13ರ ಸಂಜೆ ಮಘಾ ನಕ್ಷತ್ರದಲ್ಲಿ ತೋಂಟದಾರ್ಯ ಶ್ರೀಮದರ್ಧನಾರೀಶ್ವರ ತೇರು ಸಾಗಲಿದೆ. ಕಾರ್ಯಕ್ರಮದ ಸಾನ್ನಿಧ್ಯವನ್ನು ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮೀಜಿ ವಹಿಸುವರು. ಮುಖ್ಯ ಅತಿಥಿಗಳಾಗಿ ಶಾಸಕ ಜಿ.ಎಸ್. ಪಾಟೀಲ, ಕೆ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಿವಲೀಲಾ ದೇವಪ್ಪ ಬಂಡಿಹಾಳ ಪಾಲ್ಗೊಳ್ಳಲಿದ್ದಾರೆ.

ಲಘು ರಥೋತ್ಸವ

ಫೆ.14ರಂದು ಸಂಜೆ 6.30ಕ್ಕೆ ಲಘು ರಥೋತ್ಸವ ತೋಂಟದ ಡಾ. ಸಿದ್ದರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮಾಜಿ ಸಚಿವ ಎಸ್.ಎಸ್. ಪಾಟೀಲ, ಮಾಜಿ ಸಚಿವ ಕಳಕಪ್ಪ ಬಂಡಿ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಪಾಲ್ಗೊಳ್ಳುವರು. ಉತ್ತರ ಕರ್ನಾಟಕದ ಗಟ್ಟಿ ಆಹಾರ ರೊಟ್ಟಿ ಜಾತ್ರೆ ರಾತ್ರಿ 8ಕ್ಕೆ ನಡೆಯಲ್ಲಿದ್ದು, ಹಲವಾರು ಜಿಲ್ಲೆಯ ಜನರು ಕಡಕ್ ರೊಟ್ಟಿ ಸವಿ ಸವಿಯಲ್ಲಿದ್ದಾರೆ. ಕರ್ನಾಟಕದಲ್ಲಿ ವೈಚಾರಿಕತೆ ಜಾತ್ರೆ ಆಚಾರಣೆ ಮಾಡೋಣ ಬನ್ನಿ.

ಲಿಂ. ಡಾ. ತೋಂಟದ ಸಿದ್ದಲಿಂಗ ಶ್ರೀಗಳು ಹಾಕಿಕೊಟ್ಟ ಮಾರ್ಗದಂತೆ ಜಾತಿ, ಪಂಥ, ಮತಗಳ ಭೇದವಿಲ್ಲದೆ ಸಾವಿರಾರು ಭಕ್ತರು ಈ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಹೇಗೆ ಪರಿಸರದಲ್ಲಿ ಗಾಳಿ, ಮಳೆ, ಸೂರ್ಯನ ಕಿರಣಗಳಿಗೆ ಜಾತಿ, ಮತ, ಪಂಥ ಭೇದವಿಲ್ಲವೋ ಹಾಗೆಯೇ ಈ ಮಠದ ಭಕ್ತರು ರೊಟ್ಟಿ ತಯಾರಿಸುತ್ತಾರೆ. ಎಲ್ಲರೂ ಸೇರಿ ಸವಿಯುತ್ತಾರೆ. ಇದೇ ಭಾವೈಕ್ಯತೆಯ ಜಾತ್ಯಾತೀತ ರೊಟ್ಟಿ ಜಾತ್ರೆಯಾಗಿದೆ.

– ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು.

ಸಂಸ್ಥಾನಮಠ ಡಂಬಳ-ಗದಗ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!