ಹಾಸನ:- ಅಪರಿಚಿತ ಮಹಿಳೆಯ ಮೇಲೆ ಅತ್ಯಾಚಾರವೆಸಗಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನೇಪಾಳ ಮೂಲದ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ.
ಮೌಸಮ್ ಪಹಡಿ ಬಂಧಿತ ಆರೋಪಿ. ಕಳೆದ ಫೆ.13ರ ಬೆಳಗ್ಗೆ ಸಕಲೇಶಪುರದ ಕಡೆಯ ಯಾರ್ಡ್‌ನ ಟವರ್ ವ್ಯಾಗನ್ ಶೆಡ್ ಬಳಿ ಸುಮಾರು 40 ವರ್ಷದ ಅಪರಿಚಿತ ಮಹಿಳೆಯನ್ನು ಗಮನಿಸಿದ್ದ ಆರೋಪಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದ. ಕೃತ್ಯದ ವೇಳೆ ಆಕೆ ಗಲಾಟೆ ಮಾಡಬಾರದು ಎಂದು ದುಪ್ಪಟ್ಟದಿಂದ ಕತ್ತು ಬಿಗಿದು ಹತ್ಯೆಗೈದಿದ್ದ. ನಂತರ ತಲೆಯ ಮೇಲೆ ಸಿಮೆಂಟ್ ಇಟ್ಟಿಗೆ ಎತ್ತಿಹಾಕಿ ರಾತ್ರೋರಾತ್ರಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದ. ನಿರ್ಮಾಣ ಹಂತದಲ್ಲಿರುವ ಶೆಡ್‌ನ ಆಯಿಲ್ & ಪೆಟ್ರೋಲ್ ಗೋದಾಮಿನ ರೂಮಿನಲ್ಲಿ ಮೃತದೇಹ ಪತ್ತೆಯಾಗಿತ್ತು. ಈ ಬಗ್ಗೆ ಸಿವಿಲ್ ಇಂಜಿನಿಯರ್ ಪವನ್ ಸಿ.ಎಂ. ರೈಲ್ವೆ ಪೊಲೀಸರಿಗೆ ದೂರು ನೀಡಿದ್ದರು.
ದೂರು ಆಧರಿಸಿ ತನಿಖೆ ಚುರುಕುಗೊಳಿಸಿದ ಪೊಲೀಸರು, ಆರೋಪಿಯನ್ನು ಅರೆಸ್ಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ.