ಮರಾಠಿ ಮಾತನಾಡುವಂತೆ PDO ಗೆ ಧಮ್ಕಿ ಹಾಕಿದ್ದ MES ಪುಂಡ ಅರೆಸ್ಟ್!

0
Spread the love

ಬೆಳಗಾವಿ:- ಇತ್ತೀಚೆಗೆ ಮರಾಠಿಯಲ್ಲಿ ಮಾತನಾಡುವಂತೆ PDO ಗೆ ಧಮ್ಕಿ ಹಾಕಿದ್ದ MES ಪುಂಡನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Advertisement

ಬಂಧಿತ ಯುವಕನನ್ನು ಬೆಳಗಾವಿ ತಾಲೂಕಿನ ಕೀಣೆ ಗ್ರಾಮದ ತಿಪ್ಪಣ್ಣ ಡೋಕ್ರೆ ಎಂದು ಗುರುತಿಸಲಾಗಿದೆ. ಈತ ಇತ್ತೀಚೆಗೆ ಕೀಣೆ ಗ್ರಾಮ ಪಂಚಾಯತಿ ಕಚೇರಿಗೆ ನುಗ್ಗಿ ಪುಂಡಾಟ ಪ್ರದರ್ಶಿಸಿದ್ದ. ಅಷ್ಟೇ ಅಲ್ಲದೇ ಪಿಡಿಓ ನಾಗೇಂದ್ರ ಪತ್ತಾರ ಜೊತೆಗೆ ಮರಾಠಿಯಲ್ಲಿ ಮಾತಾಡುವಂತೆ ಅವಾಜ್ ಹಾಕಿ, ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದ.

ಈ ಬಗ್ಗೆ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ PDO ಪತ್ತಾರ್ ದೂರು ಕೊಟ್ಟಿದ್ದರು. ದೂರಿನ ಅನ್ವಯ ಆರೋಪಿಯನ್ನು ಬಂಧಿಸಿರುಲ ಪೊಲೀಸರು, ಹಿಂಡಲಗಾ ಜೈಲಿಗೆ ಕಳುಹಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here