ಗೋಲ್ಡ್ ಸ್ಮಗ್ಲಿಂಗ್ ಪ್ರಕರಣ: ನಟಿ ರನ್ಯಾ ರಾವ್ ಮನೆ ಮೇಲೆ ಇ.ಡಿ ದಾಳಿ!

0
Spread the love

ಬೆಂಗಳೂರು: ಕೆಜಿ, ಕೆಜಿ ಚಿನ್ನ ಕಳ್ಳ ಸಾಗಣೆ ಕೇಸ್‌ನಲ್ಲಿ ಸಿಕ್ಕಿಬಿದ್ದಿರುವ ನಟಿ ರನ್ಯಾ ರಾವ್‌ ಕೇಸ್‌ ತನಿಖೆ ಮುಂದುವರಿದಿದೆ. ಈ ಗೋಲ್ಡ್ ಸ್ಮಗ್ಲಿಂಗ್ ದೇಶಾದ್ಯಂತ ಸಂಚಲನ ಸೃಷ್ಟಿಸಿರುವಾಗಲೇ ಇದೀಗ ನಟಿ ರನ್ಯಾ ರಾವ್ ಮನೆ ಮೇಲೆ ಇ.ಡಿ ದಾಳಿ ನಡೆಸಿದೆ.

Advertisement

ನಂದವಾಣಿ ಮ್ಯಾನ್ಸನ್ ಸೇರಿದಂತೆ 6 ಕಡೆ ಇಡಿ ದಾಳಿ ಮಾಡಿದೆ. ಪ್ರಕರಣ ಸಂಬಂಧ ದೆಹಲಿಯಲ್ಲಿ ಇಸಿಐಆರ್ ಆಗಿದೆ. ಈ ಹಿನ್ನೆಲೆಯಲ್ಲಿ ದೆಹಲಿ ತಂಡದಿಂದ ಬೆಂಗಳೂರಿನಲ್ಲಿ ದಾಳಿ ನಡೆಸಲಾಗಿದೆ. ಇದಕ್ಕೂ ಮುನ್ನ ನಟಿ ರನ್ಯಾ,

ಆಕೆಯ ಪತಿ ಜತಿನ್ ಹಾಗೂ ಗೆಳೆಯ ತರುಣ್ ಮನೆಗಳು ಸೇರಿದಂತೆ 9 ಕಡೆಗಳಲ್ಲಿ ಡಿಆರ್‌ಐ ದಾಳಿ ನಡೆಸಿತ್ತು. ರನ್ಯಾ ಪತಿ ಜತಿನ್ ಹುಕ್ಕೇರಿ ನಿವಾಸ, ರನ್ಯಾ ಮತ್ತು ಗೆಳೆಯ ತರುಣ್‌ಗೆ ಸೇರಿದ ಜಾಗ ಹಾಗೂ ಕೋರಮಂಗಲ, ಇಂದಿರಾನಗರ ಸೇರಿದಂತೆ 9 ಕಡೆ ದಾಳಿ ಮಾಡಿ ಪರಿಶೀಲನೆ ನಡೆಸಲಾಗಿದೆ.

 

 


Spread the love

LEAVE A REPLY

Please enter your comment!
Please enter your name here