HomeGadag Newsಮಾರ್ಚ್ 22, 23ರಂದು ನಡೆಯುವ ಕ್ರೀಡಾಕೂಟಗಳ ವಿವರ

ಮಾರ್ಚ್ 22, 23ರಂದು ನಡೆಯುವ ಕ್ರೀಡಾಕೂಟಗಳ ವಿವರ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: 2024-25ನೇ ಸಾಲಿನ ಗದಗ ಜಿಲ್ಲಾ ಮಟ್ಟದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಮಾರ್ಚ್ 22 ಮತ್ತು 23ರಂದು ಗದಗ ಜಿಲ್ಲಾ ಆಡಳಿತ, ಗದಗ ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ಜಿಲ್ಲಾ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕ ಗದಗ ಇವರ ಸಂಯುಕ್ತ ಆಶ್ರಯದಲ್ಲಿ ಕೆ.ಎಚ್. ಪಾಟೀಲ ಕ್ರೀಡಾಂಗಣದಲ್ಲಿ ಸಂಘಟಿಸಲಾಗುತ್ತಿದೆ. ಮಾರ್ಚ್ 22ರಂದು ಬೆಳಿಗ್ಗೆ 9 ಗಂಟೆಯೊಳಗಾಗಿ ನೌಕರರ ಕ್ರೀಡಾಪಟುಗಳು ಕೆ.ಎಚ್. ಪಾಟೀಲ್ ಜಿಲ್ಲಾ ಕ್ರೀಡಾಂಗಣದಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ.

ಮಹಿಳೆಯರಿಗಾಗಿ: ವಾಲಿಬಾಲ್, ಕಬಡ್ಡಿ, ಟೇಬಲ್ ಟೆನ್ನಿಸ್, ಟೆನ್ನಿಸ್, ಷಟಲ್ ಬ್ಯಾಡ್ಮಿಂಟನ್, ಕೇರಂ, ಬಾಲ್ ಬ್ಯಾಡ್ಮಿಂಟನ್, ಚೆಸ್, ಟೆನ್ನಿಕ್ವಾಯ್ಟ್, ಥ್ರೋಬಾಲ್, ಯೋಗ, ಖೋಖೋ.

ಪುರುಷರಿಗಾಗಿ: ಫುಟ್‌ಬಾಲ್, ವಾಲಿಬಾಲ್, ಹಾಕಿ, ಕಬಡ್ಡಿ, ಟೇಬಲ್ ಟೆನ್ನಿಸ್, ಟೆನ್ನಿಸ್, ಷಟಲ್ ಬ್ಯಾಡ್ಮಿಂಟನ್, ಕೇರಂ, ಬಾಲ್ ಬ್ಯಾಡ್ಮಿಂಟನ್, ಕ್ರಿಕೆಟ್, ಬಾಸ್ಕೆಟ್ ಬಾಲ್, ಚೆಸ್, ಟೆನ್ನಿಕಾಯ್ಟ್, ಯೋಗ, ಖೋಖೋ ಸ್ಪರ್ಧೆಗಳಿದ್ದು, ಥ್ರೋ ಬಾಲ್ ಮತ್ತು ಟೆನಿಕ್ವಾಯ್ಟ್ ಸ್ಪರ್ಧೆಗಳು ರಾಜ್ಯ ಮಟ್ಟದವರೆಗೆ ಮಾತ್ರ ನಡೆಯಲಿವೆ.

ಈಜು ಸ್ಪರ್ಧೆಗಳ ವಿವರ: ಪುರುಷರಿಗಾಗಿ ಫ್ರೀಸ್ಟೈಲ್, ಬ್ಯಾಕ್ ಸ್ಟ್ರೋಕ್, ಬ್ರೇಸ್ಟ್ ಸ್ಟ್ರೋಕ್, ಬಟರ್ ಫ್ಲೈ, ಇಂಡಿವಿಜುವಲ್ ಮಿಡ್ಲೆ, ಫ್ರೀಸ್ಟೈಲ್‌ ರಿಲೇ, ಮಿಡ್ಲೆರಿಲೇ, ಮಹಿಳೆಯರಿಗಾಗಿ ಫ್ರೀ ಸ್ಟೈಲ್‌, ಬ್ಯಾಕ್ ಸ್ಟ್ರೋಕ್, ಬ್ರೇಸ್ಟ್ ಸ್ಟೋಕ್‌ , ಬಟರ್ ಫ್ಲೈ.

ವೆಟರನ್ಸ್ ಅಥ್ಲೇಟಿಕ್ಸ್: 40-50 ವರ್ಷ ಪುರುಷರ ವಿಭಾಗ-100ಮೀ ಓಟ, 400ಮೀ ಓಟ, 800ಮೀ ಓಟ, ಚಕ್ರ ಎಸೆತ, ಗುಂಡು ಎಸೆತ.

35-45 ವರ್ಷ ಮಹಿಳೆಯರ ವಿಭಾಗ-100ಮೀ ಓಟ, 200ಮೀ ಓಟ, 400ಮೀ ಓಟ, ಉದ್ದ ಜಿಗಿತ, ಚಕ್ರ ಎಸೆತ, ಗುಂಡು ಎಸೆತ.

50-60 ವರ್ಷ ಪುರುಷರ ವಿಭಾಗ-100ಮೀ ಓಟ, 400ಮೀ ಓಟ, 800ಮೀ ಓಟ, ಉದ್ದ ಜಿಗಿತ, ಚಕ್ರ ಎಸೆತ, ಗುಂಡು ಎಸೆತ.

45-60 ವರ್ಷ ಮಹಿಳೆಯರ ವಿಭಾಗ-100ಮೀ ಓಟ, 200ಮೀ ಓಟ, ಉದ್ದ ಜಿಗಿತ, ಚಕ್ರ ಎಸೆತ.

45 ವರ್ಷ ಮೇಲ್ಪಟ್ಟ ಪುರುಷರ ವಿಭಾಗ-ಬ್ಯಾಡ್ಮಿಂಟನ್ ಸಿಂಗಲ್ ಮತ್ತು ಡಬಲ್, ಟೇಬಲ್ ಟೆನಿಸ್ ಸಿಂಗಲ್, ಟೆನಿಸ್ ಸಿಂಗಲ್.

40 ವರ್ಷ ಮೇಲ್ಪಟ್ಟ ಮಹಿಳಯರ ವಿಭಾಗ-ಬ್ಯಾಡ್ಮಿಂಟನ್ ಸಿಂಗಲ್, ಟೇಬಲ್ ಟೆನಿಸ್ ಸಿಂಗಲ್, ಟೆನಿಕ್ವಾಯಿಟ್ ಸಿಂಗಲ್.

ಆಯ್ಕೆ ಕ್ರೀಡೆಗಳು: ಕುಸ್ತಿ, ಭಾರ ಎತ್ತುವ ಸ್ಪರ್ಧೆ, ಪವರ್ ಲಿಫ್ಟಿಂಗ್, ದೇಹದಾರ್ಡ್ಯ ಸ್ಪರ್ಧೆ.

ಸಂಗೀತ: ಹಿಂದೂಸ್ತಾನಿ, ಲಘು ಶಾಸ್ತ್ರೀಯ, ಕರ್ನಾಟಕ ಶಾಸ್ತ್ರೀಯ ಸಂಗೀತ, ಕರ್ನಾಟಕ ಲಘು ಶಾಸ್ತ್ರೀಯ ಸಂಗೀತ(ವೈಯಕ್ತಿಕ), ಜಾನಪದ ಗೀತೆಗಳು-ವೈಯಕ್ತಿಕ ಮತ್ತು ತಂಡ, ನೃತ್ಯ-ಕಥಕ್, ಮಣಿಪುರಿ, ಕುಚಿಪುಡಿ, ಕಥಕಳಿ, ಓಡಿಸ್ಸಿ, ಭರತನಾಟ್ಯ, ಜಾನಪದ ನೃತ್ಯ. ವಾದ್ಯ ಸಂಗೀತ-ಸ್ಟ್ರಿಂಗ್ ಹಿಂದೂಸ್ತಾನಿ, ಶಾಸ್ತ್ರೀಯ ಹಾಗೂ ಲಘು ಶಾಸ್ತ್ರೀಯ. ವಿಂಡ್ ವಾದ್ಯಗಳು-ಕರ್ನಾಟಕ ಶಾಸ್ತ್ರೀಯ ಹಾಗೂ ಲಘು, ಪರಕೇಷನ್ ವಾದ್ಯಗಳು-ಜನರಲ್. ಕರಕುಶಲ ವಸ್ತು ಪ್ರದರ್ಶನ-ಕಿರು ನಾಟಕ.

ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಗದಗ ಇವರನ್ನು ಖುದ್ದಾಗಿ-ದೂರವಾಣಿ-08372-238345 ಹಾಗೂ ಅಧ್ಯಕ್ಷರು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಜಿಲ್ಲಾ ಘಟಕ, ಗದಗ ಅಥವಾ ತಾಲೂಕು ಘಟಕ ಇವರಿಂದ ಪಡೆಯಬಹುದಾಗಿದೆ.

ಅಥ್ಲೆಟಿಕ್ಸ್

ಪುರುಷರು-100 ಮೀ. ಓಟ, 200ಮೀ ಓಟ, 400ಮೀ ಓಟ, 800 ಮೀಟರ್, 1500 ಮೀ ಓಟ, 110 ಮೀ & 400 ಮೀ ಹರ್ಡಲ್ಸ್, 5000 ಮೀ ಓಟ, 10,000 ಮೀ ಓಟ, ಉದ್ದ ಜಿಗಿತ, ಎತ್ತರ ಜಿಗಿತ, ಗುಂಡು ಎಸೆತ, ಚಕ್ರ ಎಸೆತ, ಜಾವೆಲಿನ್ ಥ್ರೋ, 4*100 ಮೀ ರಿಲೇ, 4*4 ಮೀ ರಿಲೇ, ಹ್ಯಾಮರ್ ಥ್ರೋ.

ಮಹಿಳೆಯರು-100ಮೀ ಓಟ, 200ಮೀ ಓಟ, 400ಮೀ ಓಟ, 800ಮೀ ಓಟ, 110ಮೀ ಹರ್ಡಲ್ಸ್, ಉದ್ದ ಜಿಗಿತ, ಎತ್ತರ ಜಿಗಿತ, ಜಾವೆಲಿನ್ ಥ್ರೋ, ಚಕ್ರ ಎಸೆತ, ಗುಂಡು ಎಸೆತ, 4*100ಮೀ ರಿಲೇ, 4*4 ಮೀ ರಿಲೇ ಸ್ಪರ್ಧೆಗಳು ನಡೆಯಲಿವೆ.

ಸಂಗೀತ, ನೃತ್ಯ ಮತ್ತು ನಾಟಕ ಸ್ಪರ್ಧೆಗಳಲ್ಲಿ ಪ್ರತ್ಯೇಕವಾಗಿ ಪುರುಷರಿಗೆ ಹಾಗೂ ಮಹಿಳೆಯರಿಗೆ ಸ್ಪರ್ಧೆಗಳು ಇರುವುದಿಲ್ಲ. ಪುರುಷರು ಹಾಗೂ ಮಹಿಳೆಯರು ಒಟ್ಟಾಗಿ ಭಾಗವಹಿಸತಕ್ಕದ್ದು. ವೃತ್ತಿ ನಿರತ ತರಬೇತುದಾರರು ಪೊಲೀಸ್ ಹಾಗೂ ಆರ್.ಪಿ.ಎಫ್ ಮುಂತಾದ ಸಮವಸ್ತçಧಾರಿತ ಹುದ್ದೆಗಳನ್ನು ಹೊಂದಿದ ಸಿಬ್ಬಂದಿ, ದಿನಗೂಲಿ ನೌಕರರು, ಪಬ್ಲಿಕ್ ಸೆಕ್ಟರ್ ಮತ್ತು ಬ್ಯಾಂಕ್ ಸಿಬ್ಬಂದಿಯವರನ್ನು ಹೊರತುಪಡಿಸಿ ರಾಜ್ಯ ಸರ್ಕಾರದ ಇಲಾಖೆಯಲ್ಲಿ 9 ತಿಂಗಳಿಗಿAತ ಹೆಚ್ಚು ಸೇವೆ ಸಲ್ಲಿಸಿದವರು ಮಾತ್ರ ಇದರಲ್ಲಿ ಭಾಗವಹಿಸಲು ಅರ್ಹರಿರುತ್ತಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!