ಐಪಿಎಲ್ ಕಾಮೆಂಟರಿ ಪ್ಯಾನೆಲ್ನಿಂದ ಟೀಮ್ ಇಂಡಿಯಾದ ಮಾಜಿ ಆಲ್ರೌಂಡರ್ ಇರ್ಫಾನ್ ಫಠಾಣ್ ಹೊರ ಬಿದ್ದಿದ್ದಾರೆ.
ಪ್ರತೀ ವರ್ಷದಂತೆ ಈ ಸೀಸನ್ ನಲ್ಲೂ ಕಾಮೆಂಟರಿ ತಂಡದ ಭಾಗವಾಗಿರುತ್ತಿದ್ದ ಇರ್ಫಾನ್ ಅವರನ್ನು ಈ ಬಾರಿ ಕೈ ಬಿಡಲು ಕಾರಣ ಏನು ಅಂತ ಅಭಿಮಾನಿಗಳು ಕೇಳುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಅವರ ವಿರುದ್ಧ ಕೇಳಿ ಬಂದಿರುವ ಗಂಭೀರ ಆರೋಪ.
ಕಾಮೆಂಟರಿ ವೇಳೆ ಇರ್ಫಾನ್ ಪಠಾಣ್ ಕೆಲ ಆಟಗಾರರನ್ನು ಗುರಿಯಾಗಿಸಿಕೊಳ್ಳುತ್ತಿದ್ದಾರೆ. ಅವರ ಟೀಕಾತ್ಮಕ ಕಾಮೆಂಟ್ಗಳು ವೈಯಕ್ತಿಕ ಪ್ರೇರಿತವಾಗಿವೆ ಎಂಬ ಆರೋಪಗಳು ಕೇಳಿ ಬಂದಿವೆ. ಹೀಗಾಗಿ ಅವರನ್ನು ಐಪಿಎಲ್ 2025ರ ಕಾಮೆಂಟ್ರಿ ಪ್ಯಾನೆಲ್ನಿಂದ ಕೈ ಬಿಡಲಾಗಿದೆ ಎಂದು ವರದಿಯಾಗಿದೆ.
ವರದಿಗಳ ಪ್ರಕಾರ, ಇರ್ಫಾನ್ ಪಠಾಣ್ ಕೆಲವು ಭಾರತೀಯ ಆಟಗಾರರ ವಿರುದ್ಧ ಮಾತನಾಡಿದ್ದರಿಂದ ಅವರನ್ನು ಕಾಮೆಂಟರಿ ಪ್ಯಾನೆಲ್ನಿಂದ ಹೊರಗಿಡಲಾಗಿದೆ. ಪಠಾಣ್ ಅವರ ವ್ಯಾಖ್ಯಾನದ ಬಗ್ಗೆ ಕೆಲವು ಆಟಗಾರರು ದೂರು ನೀಡಿದ್ದರು. ಈ ಆಟಗಾರರು ಇರ್ಫಾನ್ ತಮ್ಮ ಬಗ್ಗೆ ವೈಯಕ್ತಿಕ ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇದರಿಂದಾಗಿ ಬಿಸಿಸಿಐ ಅವರನ್ನು ಈ ಬಾರಿಯ ಐಪಿಎಲ್ ಕಾಮೆಂಟ್ರಿ ಪ್ಯಾನೆಲ್ಗೆ ಪರಿಗಣಿಸದಂತೆ ಸೂಚಿಸಿದೆ ಎಂದು ತಿಳಿದು ಬಂದಿದೆ.