ವಿಜಯಪುರ:- ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಗೆದ್ದಲಮರಿ ಗ್ರಾಮದ ಜಮೀನಿನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತಿ ಹಾಗೂ ಸೀರೆಯಲ್ಲಿ ಕತ್ತು ಬಿಗಿದಂತೆ ಹೆಂಡ್ತಿಯ ಶವ ಪತ್ತೆಯಾದ ಘಟನೆ ಜರುಗಿದೆ.
ಸಿದ್ದಪ್ಪ ಹರನಾಳ ಹಾಗೂ ಆತನ ಪತ್ನಿ ಮೇಘಾ ಹರನಾಳ ಶವ ಪತ್ತೆಯಾಗಿದೆ. ಎಂಟು ವರ್ಷಗಳ ಹಿಂದೆ ಮೇಘಾಳನ್ನ ಸಿದ್ದಪ್ಪ ಹರನಾಳ ಮದುವೆಯಾಗಿದ್ದ. ಪತಿ ಸಿದ್ದಪ್ಪನೇ ಪತ್ನಿ ಮೇಘಾಳನ್ನ ಉಸಿರುಗಟ್ಟಿಸಿ ಕೊಲೆ ಮಾಡಿ ನಂತರ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಮೃತ ಮೇಘಾಳ ತಾಯಿ ಗದ್ದೆಮ್ಮ ಹೊಸಮನಿ ಅವರು ಈ ಆರೋಪ ಮಾಡಿದ್ದಾರೆ.
ಮೃತ ಸಿದ್ದಪ್ಪನ ತಾಯಿ ಶಾಂತಮ್ಮ ಹಾಗೂ ಸಹೋದರ ಶ್ರೀಕಾಂತ ಕಿರುಕುಳವೇ ಇದಕ್ಕೆ ಕಾರಣ ಎಂದು ಗದ್ದೆಮ್ಮ ದೂರಿದ್ದಾರೆ. ಸ್ಥಳಕ್ಕೆ ಡಿವೈಎಸ್ಪಿ ಬಾಲಣ್ಣ ನಂದಗಾವಿ ಹಾಗೂ ಮುದ್ದೇಬಿಹಾಳ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಳೆದ ಎರಡ್ಮೂರು ವರ್ಷಗಳಿಂದ ಸಿದ್ದಪ್ಪ ಹಾಗೂ ಮೇಘಾ ಸಂಸಾರದಲ್ಲಿ ಜಗಳವಾಗುತ್ತಾ ಬಂದಿತ್ತು. ರಾಜಿ ಪಂಚಾಯಿತಿ ಮಾಡಿ ಚೆನ್ನಾಗಿರಿ ಎಂದು ಹೇಳಿದ್ದೆವು. ಈಗ ನಮ್ಮ ಮಗಳನ್ನು ಕೊಲೆ ಮಾಡಿ ಅಳಿಯ ನೇಣಿಗೆ ಶರಣಾಗಿದ್ದಾನೆಂದು ಮಹಿಳೆ ಕುಟುಂಬಸ್ಥರು ಆರೋಪಿಸಿದ್ದಾರೆ.