ಶಿರಹಟ್ಟಿ: ಮಂಗಳವಾರ ಶಿರಹಟ್ಟಿ ಮತ್ತು ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಸಂಜೆ 5ರ ಸುಮಾರಿಗೆ ಸುಮಾರು 1ಗಂಟೆಗೂ ಅಧಿಕ ಕಾಲ ಗುಡುಗು ಸಹಿತ ಭಾರೀ ಮಳೆ ಸುರಿಯಿತು. ಸತತ ಬಿಸಿಲಿನಿಂದ ಕಂಗೆಟ್ಟಿದ್ದ ಸಾರ್ವಜನಿಕರಿಗೆ ಮಳೆಯು ತಂಪೆರೆಯಿತು. ಮುಂಗಾರು ಪೂರ್ವದಲ್ಲಿಯೇ ವರ್ಷಧಾರೆಯ ಆಗಮನವಾಗಿದ್ದು, ಜಮೀನುಗಳಲ್ಲಿ ಬಿತ್ತನೆಗೆ ಅಣಿ ಮಾಡಿದ ಕೆಲವು ಜಮೀನುಗಳಲ್ಲಿ ನೀರು ನಿಂತಿದೆ.
Advertisement