ಮಾರ್ಚ್ 30ರಂದು ಹೊಂಡ ತುಳುಕಿಸುವ ಕಾರ್ಯಕ್ರಮ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಯುಗಾದಿ ಪ್ರಯುಕ್ತ ಇಲ್ಲಿಯ ಅತ್ತಿಮಬ್ಬೆ ಮಹಾದ್ವಾರದ ಹತ್ತಿರವಿರುವ ಮಾರುತಿ ದೇವರ ಬಣ್ಣದ ಹೊಂಡ ತುಳುಕಿಸುವ ಕಾರ್ಯಕ್ರಮ ಮಾರ್ಚ್ 30ರಂದು ನಡೆಯಲಿದೆ.

Advertisement

ಸಂಜೆ 5ಕ್ಕೆ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಪೂಜೆ ಸಲ್ಲಿಸಿದ ನಂತರ ಹೊಂಡ ತುಳುಕಿಸುವ ಕಾರ್ಯಕ್ರಮ ನಡೆಯಲಿದೆ. ಇದಕ್ಕೂ ಪೂರ್ವ ಬೆಳಿಗ್ಗೆ ಮಾರುತಿ ದೇವರಿಗೆ ವಿವಿಧ ಹೂವುಗಳ ಅಲಂಕಾರದೊಂದಿಗೆ ಅಭಿಷೇಕ ಹಾಗೂ ವಿಶೇಷ ಪೂಜಾ ಕೈಂಕರ್ಯಗಳು ಜರುಗುವವು. ನಂತರ ಗ್ರಾಮದ ವಿವಿಧ ದೇವಸ್ಥಾನಗಳಿಗೆ ತೆರಳಿ ಉಡಿ ತುಂಬುವ ಕಾರ್ಯಕ್ರಮಗಳು ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.


Spread the love

LEAVE A REPLY

Please enter your comment!
Please enter your name here