ನವದೆಹಲಿ:- ಕೇಂದ್ರ ಸರ್ಕಾರವು ಸರ್ಕಾರಿ ನೌಕರರಿಗೆ ಯುಗಾದಿ ಹಬ್ಬದ ನಿಮಿತ್ತ ಗಿಫ್ಟ್ವೊಂದನ್ನು ನೀಡಿದೆ. ಲಕ್ಷಾಂತರ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ತುಟ್ಟಿ ಭತ್ಯೆ ಹೆಚ್ಚಳದ ಘೋಷಣೆಗಾಗಿ ಕಾಯುತ್ತಿದ್ದರು. ಅದರಂತೆ ಇದೀಗ ಕೇಂದ್ರವು ಸರ್ಕಾರಿ ನೌಕರರಿಗೆ ಶೇಕಡಾ 2ರಷ್ಟು ಡಿಎ ಏರಿಕೆ ಮಾಡಿದೆ.
Advertisement
ಈ ಬಗ್ಗೆ ಕೇಂದ್ರ ಸರ್ಕಾರದ ಕ್ಯಾಬಿನೆಟ್ ಸಭೆಯಲ್ಲಿ ತೀರ್ಮಾನ ಮಾಡಲಾಗಿದ್ದು, ಶೇಕಡಾ 53 ರಿಂದ ಶೇ.55ಕ್ಕೆ ಡಿಎ ಏರಿಕೆ ಮಾಡಲಾಗಿದೆ. ಕೇಂದ್ರ ಸರ್ಕಾರದ ನೌಕರರು, ಪಿಂಚಣಿದಾರರಿಗೆ ಏರಿಕೆಯ ಲಾಭ ಪಡೆಯಲಿದ್ದಾರೆ.
ಈ ಹಿಂದೆ, ಅಕ್ಟೋಬರ್ 2024ರಲ್ಲಿ ಡಿಎ ಹೆಚ್ಚಳವನ್ನು ಘೋಷಿಸಲಾಗಿತ್ತು. ಆ ಸಮಯದಲ್ಲಿ, ಕೇಂದ್ರ ಸರ್ಕಾರಿ ನೌಕರರಿಗೆ ಶೇ.3 ರಷ್ಟು ತುಟ್ಟಿ ಭತ್ಯೆಯನ್ನು ಹೆಚ್ಚಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿತು. ಅದಾದ ನಂತರ ಇದೀಗ ಒಟ್ಟು ತುಟ್ಟಿ ಭತ್ಯೆ ಶೇಕಡಾ 53 ರಿಂದ ಶೇ.55ಕ್ಕೆ ಏರಿಕೆ ಮಾಡಲಾಗಿದೆ.