ಚಿಕ್ಕಬಳ್ಳಾಪುರ: ಇಲ್ಲಿನ ಸರ್ಕಾರಿ ಕಚೇರಿಯಲ್ಲಿ ಏಕಾಏಕಿ ಬೆಂಕಿ ಅವಘಡ ಸಂಭವಿಸಿದ್ದು, ಮಹತ್ವದ ದಾಖಲೆಗಳು ಸುಟ್ಟು ಭಸ್ಮವಾಗಿರುವ ಘಟನೆ ಚಿಕ್ಕಬಳ್ಳಾಪುರ ನಗರದ ಪಶುಪಾಲನಾ ಹಾಗೂ ಪಶುವೈದ್ಯ ಸೇವಾ ಇಲಾಖೆಯ ಆವರಣದಲ್ಲಿರುವ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ನಡೆದಿದೆ.
Advertisement
ದಾಖಲೆಗಳನ್ನ ಸಂಗ್ರಹ ಮಾಡಿದ್ದ ಕೊಠಡಿಯಲ್ಲೇ ಬೆಂಕಿ ತಗುಲಿದ್ದು, ರಾತ್ರಿಯೇ ಬೆಂಕಿ ಹೊತ್ತಿಕೊಂಡು ಕಚೇರಿ ಧಗ ಧಗ ಹೊತ್ತಿ ಉರಿದಿದೆ.
ಬೆಳಗ್ಗೆ ಸಿಬ್ಬಂದಿ ನೋಡಿದಾಗ ಬೆಂಕಿ ಅವಘಡ ಪ್ರಕರಣ ಬೆಳಕಿಗೆ ಬಂದಿದೆ. ಆಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಅಳಿದುಳಿದು ಇನ್ನೂ ಉರಿಯುತ್ತಿದ್ದ ದಾಖಲೆಗಳನ್ನ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.