ರನ್ ಮಷಿನ್, ದಾಖಲೆಗಳ ದಮನಕಾರ. ಮನೋಜ್ಞ ಬ್ಯಾಟಿಂಗ್ನಿಂದ ತನ್ನದೇ ಸಾಮ್ರಾಜ್ಯವನ್ನ ಕಟ್ಟಿ ಮೆರೆದಾಡುತ್ತಿರುವ ಕ್ರಿಕೆಟ್ ಲೋಕದ ರಾಜ ಅಂದ್ರೆ ಅದು ವಿರಾಟ್ ಕೊಹ್ಲಿ.
ವಿರಾಟ್ ಗೆ ದೇಶದಲ್ಲಷ್ಟೇ ಅಲ್ಲ ಅಂತರರಾಷ್ಟ್ರೀಯ ಮಟ್ಟದಲ್ಲೂ ಸಾಕಷ್ಟು ಅಭಿಮಾನಿಗಳಿದ್ದಾರೆ. ಅಂತಹ ಫ್ಯಾನ್ಸ್ ಗಳಿಗೆ ಇದೀಗ ಮಾಜಿ ಟೀಮ್ ಇಂಡಿಯಾ ನಾಯಕ ಕೊಹ್ಲಿ ಭರ್ಜರಿ ಗುಡ್ನ್ಯೂಸ್ ನೀಡಿದ್ದಾರೆ.
ಟಿ-20 ವಿಶ್ವಕಪ್ ಗೆದ್ದ ಬೆನ್ನಲ್ಲೇ ಕಿಂಗ್ ಕೊಹ್ಲಿ, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ಗೆ ಗುಡ್ಬೈ ಹೇಳಿದ್ದರು. ನಂತರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಎದುರಾಗಿತ್ತು. ಈ ಅವಧಿಯಲ್ಲಿ ಚಾಂಪಿಯನ್ಸ್ ಟ್ರೋಫಿ ಬಳಿಕ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್ಗೂ ಗುಡ್ಬೈ ಹೇಳಲಿದ್ದಾರೆ ಎಂಬ ವದಂತಿ ಶುರುವಾಗಿದ್ದವು. ಈ ಐಸಿಸಿ ಟೂರ್ನಿಯಲ್ಲಿ ಕೊಹ್ಲಿ ಅದ್ಭುತ ಆಟವಾಡಿದರು. ಪರಿಣಾಮ ಭಾರತ ತಂಡ ಚಾಂಪಿಯನ್ ಕೂಡ ಆಯಿತು. ಮಾತ್ರವಲ್ಲ, ಅದೇ ದಿನ ಏಕದಿನ ಕ್ರಿಕೆಟ್ಗೆ ಗುಡ್ಬೈ ಹೇಳ್ತಾರೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಅಭಿಮಾನಿಗಳ ಈ ನಿರೀಕ್ಷೆಯನ್ನು ಕೊಹ್ಲಿ ಸುಳ್ಳು ಮಾಡಿದ್ದರು.
ಅಷ್ಟಕ್ಕೂ ಕೊಹ್ಲಿ ನಿವೃತ್ತಿ ಕುರಿತ ಚರ್ಚೆಗಳು ನಿಂತಿರಲಿಲ್ಲ. ಇದೀಗ ಈ ಎಲ್ಲಾ ವದಂತಿಗಳಿಗೆ ಕೊಹ್ಲಿ ಅಧಿಕೃತವಾಗಿ ಫುಲ್ಸ್ಟಾಪ್ ಇಟ್ಟಿದ್ದಾರೆ. ಐಪಿಎಲ್ಗೆ ಸಂಬಂಧಿಸಿದ ಕಾರ್ಯಕ್ರಮವೊಂದರಲ್ಲಿ ಕೊಹ್ಲಿ ಭಾಗಿಯಾಗಿದ್ದರು. ಅಲ್ಲಿ ನಿರೂಪಕರು, ಮುಂದಿನ ದೊಡ್ಡ ಹೆಜ್ಜೆಯ ಬಗ್ಗೆ ಏನಾದರೂ ಸುಳಿವು ನೀಡೋದು ಇದೆಯಾ ಎಂದು ಕೇಳಿದ್ದಾರೆ. ಆಗ ಉತ್ತರಿಸಿದ ಕೊಹ್ಲಿ ನನ್ನ ನೆಕ್ಸ್ಟ್ ಟಾರ್ಗೆಟ್ ವರ್ಲ್ಡ್ ಕಪ್ ಎಂದಿದ್ದಾರೆ. ಈ ಮೂಲಕ ನಿವೃತ್ತಿಗೆ ತೆರೆ ಎಳೆದಿದ್ದಾರೆ.



