ಲಕ್ನೋ:- ಇತ್ತೀಚಿನ ದಿನಗಳಲ್ಲಿ ಸಂಬಂಧಕ್ಕೆ ಬೆಲೆಯೇ ಇಲ್ಲದಂತಾಗಿದೆ ಮರ್ರೆ. ಪ್ರೀತಿ ಯಾರ ಮೇಲೆ, ಯಾವಾಗ ಬರತ್ತೋ ಏನು ಹೇಳೋದಿಕ್ಕೆ ಆಗಲ್ಲ. ಅದರಂತೆ ಇಲ್ಲೋರ್ವ ಮಹಿಳೆ ತನ್ನ ಅಳಿಯನ ಅಪ್ಪನ ಜೊತೆ ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದ ಬದೌನ್‌ನಲ್ಲಿ ಜರುಗಿದೆ.
43 ವರ್ಷದ ಮಮತಾ ಎಂಬ ಮಹಿಳೆಯು, 46 ವರ್ಷದ ಶೈಲೇಂದ್ರ ಅವರ ಜೊತೆ ಪರಾರಿ ಆಗಿದ್ದಾರೆ. ಈ ಬಗ್ಗೆ ಮಮತಾ ಪತಿ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಾರೆ. ಮಮತಾ ಅವರ ಪತಿ ಸುನಿಲ್ ಕುಮಾರ್ ಸಿಂಗ್ ಟ್ರಕ್ ಚಾಲಕರಾಗಿದ್ದರು. ಸುನಿಲ್ ತಿಂಗಳಿಗೆ ಎರಡು ಬಾರಿ ಮಾತ್ರ ಮನೆಗೆ ಭೇಟಿ ನೀಡುತ್ತಿದ್ದರು. ಆದರೆ ನಿಯಮಿತವಾಗಿ ಮನೆಗೆ ಹಣವನ್ನು ಕಳುಹಿಸುತ್ತಿದ್ದರು. ಮಮತಾ ತನ್ನ ಗಂಡನ ಅನುಪಸ್ಥಿತಿಯಲ್ಲಿ ಶೈಲೇಂದ್ರ ಅವರನ್ನು ಮನೆಗೆ ಕರೆಯುತ್ತಿದ್ದರು. ಮಮತಾ ಸುಮಾರು ಒಂದು ವರ್ಷದಿಂದ ಶೈಲೇಂದ್ರ ಅವರೊಂದಿಗೆ ಸಂಬಂಧ ಹೊಂದಿದ್ದಾರೆಂದು ಸುನಿಲ್ ಅನುಮಾನ ವ್ಯಕ್ತಪಡಿಸಿದ್ದಾರೆ.
ಘಟನೆ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರಿದಿದೆ.