ಹುಬ್ಬಳ್ಳಿ: ಸಾರಿಗೆ ಬಸ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಇಲ್ಲಿನ ಕುಸುಗಲ್ಲ ಗ್ರಾಮದ ರಿಂಗ್ ರಸ್ತೆ ಬಳಿ ಜರುಗಿದೆ. ರವಿ ಬಾಳಿಕಾಯಿ (33)ಮೃತ ಸವಾರ.
Advertisement
ಹುಬ್ಬಳ್ಳಿಯಿಂದ ನವಲಗುಂದಕ್ಕೆ ಬಸ್ ತೆರಳುತಿತ್ತು. ಇದೇ ವೇಳೆ ನವಲಗುಂದ ಕಡೆ ಯಿಂದ ಹುಬ್ಬಳ್ಳಿಗೆ ಬೈಕ್ ಸವಾರ ಬರುತ್ತಿದ್ದ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ. ಅಪಘಾತದಿಂದ ಹೆಚ್ಚು ರಕ್ತಸ್ರಾವವಾಗಿ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.