HomeGadag Newsಸಣ್ಣ ಸಮಾಜ ಎಂದು ಕೀಳರಿಮೆ ಬೇಡ

ಸಣ್ಣ ಸಮಾಜ ಎಂದು ಕೀಳರಿಮೆ ಬೇಡ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಶ್ರೀ ಏಳು ಮಕ್ಕಳ ತಾಯಿ ದೇವಸ್ಥಾನದ ನೂತನ ಗೋಪುರದ ಕಳಸಾರೋಹಣ, ಹಾಗೂ ದೇವಸ್ಥಾನದ ಜಾತ್ರಾ ಮಹೋತ್ಸವ ಮತ್ತು ಶ್ರೀ ಡೋಹರ್ ಕಕ್ಕಯ್ಯನವರ ಜಯಂತ್ಯುತ್ಸವದ ಕಾರ್ಯಕ್ರಮದ ಎರಡನೇ ದಿನವಾದ ಮಂಗಳವಾರ ವಿಶೇಷ ಪೂಜೆ, ಅಲಂಕಾರಗಳು ಸಂಪ್ರದಾಯದAತೆ ನೆರವೇರಿದವು.

ನಂತರ ನಡೆದ ಧರ್ಮ ಸಭೆಯಲ್ಲಿ ಹುಬ್ಬಳ್ಳಿ ಮೂರುಸಾವಿರ ಮಠದ ಡಾ. ಶ್ರೀ ಗುರುಸಿದ್ದ ರಾಜಯೋಗಿಂದ್ರ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಡೋಹರ ಕಕ್ಕಯ್ಯನವರು ಭಕ್ತಿ ಶ್ರೇಷ್ಠತೆಯನ್ನು ಮೆರೆದಿದ್ದರು. ಕಲ್ಯಾಣದ ಕ್ರಾಂತಿಯಾದಾಗ ವಚನ ಸಾಹಿತ್ಯ ಸಂರಕ್ಷಣೆ ಮಾಡುವ ಹೊಣೆಗಾರಿಕೆಯನ್ನು ಹೊತ್ತು ಚನ್ನಬಸವಣ್ಣನವರ ನೇತೃತ್ವದಲ್ಲಿ ಸಾವಿರಾರು ಶರಣರು ವಚನ ಸಾಹಿತ್ಯವನ್ನು ಹೊತ್ತು ಬಿಜ್ಜಳನ ಸೈನ್ಯವನ್ನು ತಪ್ಪಿಸಿಕೊಳ್ಳುವ ಸಲುವಾಗಿ ಬರುವ ಸುಮಾರು ಮೂರು ಸಾವಿರ ಶರಣರು ಉತ್ತರದಿಂದ ದಕ್ಷಿಣದ ಕಡೆಗೆ ಬರುವಾಗ ಹುಬ್ಬಳ್ಳಿ ಮಠಕ್ಕೆ ಬರುತ್ತಾರೆ. ಇವರಲ್ಲಿ ಶರಣ ಕಕ್ಕಯ್ಯನವರು ಪ್ರಮುಖರಾಗಿದ್ದರು.

3 ಸಾವಿರ ಶರಣರು ಮಠಕ್ಕೆ ಬಂದು ಹೋಗಿದ್ದರಿಂದ ಮೂರುಸಾವಿರ ಮಠ ಎಂದು ಹೆಸರು ಇಡಲಾಯಿತು. ಸಣ್ಣ ಸಮಾಜ ಎಂದು ಕೀಳುರಿಮೆ ಬೇಡ. ಸಂಸ್ಕಾರ, ಭಕ್ತಿಯಿಂದ ಉನ್ನತ ಸ್ಥಾನದಲ್ಲಿದ್ದಿರಿ, ಸಮಾಜಕ್ಕೆ ಒಳ್ಳೆಯ ವಿಚಾರ ಮಾಡಿ, ಮಕ್ಕಳಿಗೆ ಉತ್ತಮ ವಿಚಾರ, ಸಂಸ್ಕಾರ, ಶಿಕ್ಷಣ ದೊರಕಿಸಿ ಎಂದು ಸಲಹೆ ನೀಡಿದರು.

ಶ್ರೀ ಏಳು ಮಕ್ಕಳ ತಾಯಿ ಭಕ್ತರ ಸೇವಾ ಟ್ರಸ್ಟ್ ಕಮಿಟಿ ಅಧ್ಯಕ್ಷ ಪೂರ್ಣಾಜಿ ಖರಾಟೆ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಡಾ. ಚಂದ್ರು ಲಮಾಣಿ, ಮಾಜಿ ಶಾಸಕರಾದ ಜಿ.ಎಂ. ಮಹಾಂತಶೆಟ್ಟರ, ಜಿ.ಎಸ್. ಗಡ್ಡದೇವರಮಠ, ರಾಮಣ್ಣ ಲಮಾಣಿ, ರಾಮಕೃಷ್ಣ ದೊಡ್ಡಮನಿ, ವಿಠ್ಠಲ್ ಪೊಳ, ಪುರಸಭೆ ಅಧ್ಯಕ್ಷೆ ಯಲ್ಲವ್ವ ದುರಗಣ್ಣವರ, ಉಪಾಧ್ಯಕ್ಷ ಪೀರದೋಷ ಆಡೂರ, ಪೂಜಾ ಖರಾಟೆ, ನಾಗೇಂದ್ರಪ್ಪ ಖರಾಟೆ, ಫಕ್ಕೀರಪ್ಪ ನಾರಾಯಣಕರ, ಓಂಕಾರೆಪ್ಪ ಗಜಾಕೋಶ, ವಾಸಪ್ಪ ಗಜಾಕೋಶ, ತಿಪ್ಪಣ್ಣ ಖರಾಟೆ, ಘಂಟೆಪ್ಪ ಗಜಾಕೋಶ, ಪ್ರಭು ನಾರಾಯಣಕರ, ಮೋಹನ ಗಜಾಕೋಶ, ಪರಮಾನಂದ ಘೋಡ್ಕೆ ಮುಂತಾದವರಿದ್ದರು. ಬಸವರಾಜ ಖರಾಟೆ, ನಿಖಿತಾ ಶೇರಖಾನೆ, ರಾಜು ಖರಾಟೆ, ಸತೀಶ ನಾರಾಯಣಕರ ನಿರ್ವಹಿಸಿದರು.

ಬೀರವಳ್ಳಿ ಗುರುದೇವ ತಪೋವನಪೀಠಾಧ್ಯಕ್ಷರಾದ ಗುರು ಮಾತಾಜಿ ನಂದಾತಾಯಿ ಮಾತನಾಡಿ, ಸಮಾಜ ಯಾವುದೇ ಆದರೂ ಅದಕ್ಕೆ ತನ್ನದೇ ಆದ ಸಂಸ್ಕೃತಿ-ಸಂಪ್ರದಾಯ ಇರುತ್ತದೆ. ಡೋಹರ ಕಕ್ಕಯ್ಯನವರು ಪ್ರಮುಖರಾಗಿದ್ದು, ತಮ್ಮ ಭಕ್ತಿ ನಿಷ್ಠೆಯಿಂದ ಸಮಾಜಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ. ಅವರನ್ನು ಸ್ಮರಿಸುವ ಕಾರ್ಯ ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img