ಜ. ತೋಂಟದಾರ್ಯ ಪ್ರೌಢಶಾಲೆಗೆ ಉತ್ತಮ ಫಲಿತಾಂಶ

0
Spread the love

ವಿಜಯಸಾಕ್ಷಿ ಸುದ್ದಿ, ಡಂಬಳ: ಜಗದ್ಗುರು ತೋಂಟದಾರ್ಯ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದಿದ್ದಾರೆ.

Advertisement

ಸಂಜನಾ ಸಣ್ಣಪ್ಯಾಟಿ 557 (ಶೇ. 89.12) ಪ್ರಥಮ, ಭಾಗ್ಯ ರಾಘಣ್ಣವರ 542 (ಶೇ. 86.72) ದ್ವಿತೀಯ ಹಾಗೂ ರಂಜಾನಬಿ ಹೊಂಬಳ 528 (ಶೇ. 84.48) ತೃತೀಯ ಸ್ಥಾನ ಪಡೆದಿದ್ದಾರೆ. ಅಗ್ರ ಶ್ರೇಣಿಯಲ್ಲಿ 4, ಪ್ರಥಮ ದರ್ಜೆಯಲ್ಲಿ 24 ಹಾಗೂ ದ್ವಿತೀಯ ದರ್ಜೆಯಲ್ಲಿ 10, ತೃತೀಯ ದರ್ಜೆಯಲ್ಲಿ 2 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಒಟ್ಟು ಶಾಲೆಯ ಫಲಿತಾಂಶ ಶೇ. 81.81 ಆಗಿದೆ.

ಜಗದ್ಗುರು ತೋಂಟದ ಡಾ. ಸಿದ್ದರಾಮ ಮಹಾಸ್ವಾಮಿಗಳು, ಕಾರ್ಯದರ್ಶಿ ಎಸ್.ಎಸ್. ಪಟ್ಟಣಶೆಟ್ಟರ, ಮುಖ್ಯೋಪಾಧ್ಯಾಯರು, ಗುರುವೃಂದ, ಗ್ರಾಮದ ಶಿಕ್ಷಣ ಪ್ರೇಮಿಗಳು, ಹಿರಿಯರು ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here