HomeKarnataka Newsದೇಶಾದ್ಯಂತ ಮಾಕ್ ಡ್ರಿಲ್: ಬೆಂಗಳೂರಿನಲ್ಲಿ ನಾಳೆ ಪವರ್ ಕಟ್!

ದೇಶಾದ್ಯಂತ ಮಾಕ್ ಡ್ರಿಲ್: ಬೆಂಗಳೂರಿನಲ್ಲಿ ನಾಳೆ ಪವರ್ ಕಟ್!

For Dai;y Updates Join Our whatsapp Group

ಬೆಂಗಳೂರು:- ಪಹಲ್ಗಾಮ್ ದಾಳಿಯ ನಂತರ ಪಾಕಿಸ್ತಾನದ ಮೇಲೆ ನಿಗಿ-ನಿಗಿ ಕೆಂಡಕಾರುತ್ತಿರುವ ಭಾರತ ದೇಶವು ಯುದ್ಧಕ್ಕೆ ಸಿದ್ಧವಾದಂತಿದೆ. ಅದರಂತೆ ಕೇಂದ್ರ ಗೃಹ ಸಚಿವಾಲಯ ಮೇ 7ರಂದು ದೇಶಾದ್ಯಂತ ಮಾಕ್ ಡ್ರಿಲ್‌ ನಡೆಸಲು ರಾಜ್ಯಗಳಿಗೆ ಸೂಚನೆ ಕೊಟ್ಟಿದೆ. ಅದರಂತೆ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಮಾಕ್​ ಡ್ರಿಲ್​ ನಡೆಯಲಿದೆ. ಮಾಕ್​ ಡ್ರಿಲ್​ ಸಂಬಂಧ ಬೆಂಗಳೂರು ನಗರದಾದ್ಯಂತ 6.40ರ ಸುಮಾರಿಗೆ ವಿದ್ಯುತ್​ ಸ್ಥಗಿತಗೊಳ್ಳಲಿದೆ. ರಾಯಚೂರು ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ನಡೆಯಬೇಕಿದ್ದ ಮಾಕ್​ ಡ್ರಿಲ್ ಮುಂದೂಡಲಾಗಿದೆ.

ಬೆಂಗಳೂರಿನಲ್ಲಿ ಸಂಜೆ 5.30ರಿಂದ ಸಂಜೆ 7 ಗಂಟೆಯವರೆಗೆ ಮಾಕ್​ ಡ್ರಿಲ್​ ನಡೆಯುವ ಸಾಧ್ಯತೆ ಇದೆ. ಸಂಜೆ 6.40ರ ಸುಮಾರಿಗೆ ನಗರದಾದ್ಯಂತ ವಿದ್ಯುತ್​ ಸ್ಥಗಿತಗೊಳ್ಳಲಿದೆ. ದೊಡ್ಡ ದೊಡ್ಡ ಕಟ್ಟಡಗಳನ್ನು ರಕ್ಷಣೆ ಮಾಡುವ ಅಣಕು ಪ್ರದರ್ಶನ ನಡೆಯುತ್ತದೆ. ವಾಟರ್ ಜೆಟ್ ಬಳಸಿ ರಕ್ಷಣಾ ಕಾರ್ಯಾಚರಣೆ ಅಣಕು ಪ್ರದರ್ಶನ ನಡೆಯಲಿದೆ.

ಕ್ಯಾಟಗರಿ 2 ರಲ್ಲಿ ಕರ್ನಾಟಕದ ಎರಡು ಮೂರು ಜಿಲ್ಲೆಗಳಿವೆ. ಕಾರವಾರದ ಮಲ್ಲಾಪುರ, ರಾಯಚೂರಿನ ಶಕ್ತಿನಗರ ಮತ್ತು ಬೆಂಗಳೂರು ಕ್ಯಾಟಗರಿ 2 ನಲ್ಲಿ ಬರುವ ಪ್ರದೇಶವಾಗಿದೆ. ಆಪರೇಶನ್ ಅಭ್ಯಾಸದ ಹೆಸರಿನಲ್ಲಿ ಮಾಕ್ ಡ್ರಿಲ್ ನಡೆಯಲಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img