ಗೀತಾ ಬಾಬುಸಿಂಗ್‌ರಿಗೆ ಪಿಎಚ್‌ಡಿ

0
Spread the love

ವಿಜಯಸಾಕ್ಷಿ ಸುದ್ದಿ, ವಿಜಯಪುರ: ಗುಲಬರ್ಗಾ ವಿಶ್ವವಿದ್ಯಾನಿಲಯವು ಗೀತಾ ಬಾಬುಸಿಂಗ್ ಅವರು `ಎ ಸ್ಟಡಿ ಆನ್ ರಿಸ್ಟೋರೇಷನ್ ಆಫ್ ಫಾಗಿ ಆಂಡ್ ಮೊಷನ್ ಬ್ರೈ ಇಮೇಜಿಸ್ ಆಫ್ ರೋಡ್ ಸೀನ್ಸ್’ ಕುರಿತು ಸಲ್ಲಿಸಿದ್ದ ಮಹಾಪ್ರಬಂಧಕ್ಕೆ ಪಿಎಚ್‌ಡಿ ಪದವಿ ದೊರಕಿದೆ.

Advertisement

ಗೀತಾ ಬಾಬುಸಿಂಗ್ ಗುಲಬರ್ಗಾ ವಿವಿಯ ವಿಜ್ಞಾನ ನಿಕಾಯದ ಅನ್ವಯಿಕ ಎಲೆಕ್ಟ್ರಾನಿಕ್ಸ್ ವಿಭಾಗದ ಡಾ. ಆರ್.ಎಲ್. ರಾಯಭಾಗಕರ್ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಕೈಗೊಂಡಿದ್ದರು. ಡಾಕ್ಟರೇಟ್ ಪದವಿ ಪಡೆದಿರುವ ಡಾ. ಗೀತಾ ಬಾಬುಸಿಂಗ್ ಅವರನ್ನು ಹಂಗಾಮಿ ಕುಲಪತಿ ಗೂರು ಶ್ರೀರಾಮುಲು, ಕುಲಸಚಿವ ರಮೇಶ ಲಂಡನಕರ್, ಮೌಲ್ಯಮಾಪನ ಕುಲಸಚಿವ ಪ್ರೊ. ನಿಂಗಪ್ಪ ಕಣ್ಣೂರು ಅವರು ಅಭಿನಂದಿಸಿದ್ದಾರೆ. ಡಾ. ಗೀತಾ ಬಾಬುಸಿಂಗ್ ಅವರು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಕಂಪ್ಯೂಟರ್ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ. ಜಿ.ಜಿ. ರಜಪೂತ ಅವರ ಪತ್ನಿ.


Spread the love

LEAVE A REPLY

Please enter your comment!
Please enter your name here