ವಿಜಯಸಾಕ್ಷಿ ಸುದ್ದಿ, ಗದಗ: ತಾಲೂಕಿನ ಅಡವಿಸೋಮಾಪುರ ಗ್ರಾಮದ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಪವಿತ್ರಾ ಕೃಷ್ಣಪ್ಪ ಖಾನಾಪುರ 589 (ಶೇ. 94.34) ಅಂಕಗಳೊಂದಿಗೆ ಶಾಲೆಗೆ ಪ್ರಥಮ ಸ್ಥಾನ ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದ್ದಾಳೆ.
ಇದೇ ಶಾಲೆಯ ಭಾಗ್ಯ ಜಗ್ಗಲ-572 ಅಂಕಗಳೊಂದಿಗೆ ದ್ವೀತಿಯ ಹಾಗೂ ಶಹನಾಜಬೇಗಂ ಲಕ್ಕುಂಡಿ-565 ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆದಿದ್ದಾರೆ. ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಅಡವಿಸೋಮಾಪೂರದ ಶ್ರೀ ಕನಕದಾಸ ವಿವಿಧೋದ್ದೇಶಗಳು ಟ್ರಸ್ಟ್ನ ಅಧ್ಯಕ್ಷ ಮಂಜುನಾಥ ಜಡಿ ಮೌರ್ಯ, ಉಪಾಧ್ಯಕ್ಷ ಈರಪ್ಪ ಹೊಸಳ್ಳಿ, ಕಾರ್ಯದರ್ಶಿ ಪ್ರಕಾಶ ಖಾನಾಪುರ, ತುಳಸಪ್ಪ ನಾವಳ್ಳಿ, ಕೃಷ್ಣಪ್ಪ ಖಾನಾಪೂರ ಸೇರಿದಂತೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.



