ಸೂರಣಗಿ ಗ್ರಾಮದಲ್ಲಿ ಏ.27ರಂದು ಸಿಡಿಲಿನಿಂದ ಎತ್ತೊಂದು ಮೃತಪಟ್ಟಿತ್ತು. ಎತ್ತಿನ ಮಾಲಕ, ರೈತ ಸೋಮಪ್ಪ ಭೀಮಪ್ಪ ಪೂಜಾರ ಅವರಿಗೆ ಶಾಸಕ ಡಾ. ಚಂದ್ರು ಲಮಾಣಿ ಸರ್ಕಾರದ ಪರಿಹಾರ ಧನ (ವಿಪತ್ತು ನಿರ್ವಹಣಾ ಖಾತೆ) 37500 ರೂ ಮೊತ್ತದ ಚೆಕ್ ವಿತರಿಸಿದರು. ತಹಸೀಲ್ದಾರ ವಾಸುದೇವ ಸ್ವಾಮಿ, ನಾಗರಾಜ ಹಾವಳಕೇರಿ, ಸೋಮಪ್ಪ ಪೂಜಾರಿ, ಕಂದಾಯ ಇಲಾಖೆ ಅಧಿಕಾರಿ, ಸಿಬ್ಬಂದಿಗಳು ಇದ್ದರು.
Trending Now



