ರಾಮನಗರ ಜಿಲ್ಲೆಗೆ ಬೆಂಗಳೂರು ದಕ್ಷಿಣವೆಂದು ಮರುನಾಮಕರಣ: DCM ಡಿಕೆಶಿಗೆ HDK ತಿರುಗೇಟು!

0
Spread the love

ಬೆಂಗಳೂರು:- ರಾಮನಗರ ಜಿಲ್ಲೆಗೆ ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡಲು ಮುಂದಾಗಿರುವ DCM ಡಿಕೆ ಶಿವಕುಮಾರ್ ಅವರಿಗೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಟಾಂಗ್ ಕೊಟ್ಟಿದ್ದಾರೆ.

Advertisement

ಈ ಸಂಬಂಧ ಮಾತನಾಡಿದ ಅವರು, ಅಭಿವೃದ್ಧಿ ನಿಟ್ಟಿನಲ್ಲಿ ದೊಡ್ಡಬಳ್ಳಾಪುರ, ದೇವನಹಳ್ಳಿ ಸೇರಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಮಾಡಲಾಗಿತ್ತು. ಇದೀಗ ಅವರ ಜಮೀನುಗಳಿಗೆ ಬೆಲೆ ಏರಿಸಿಕೊಳ್ಳಲು ಹಾಗೆ ಮಾಡಿರಬಹುದು. ಈ ರಾಜಕರಣಕ್ಕೆಲ್ಲ ನಾನು ತಲೆ ಕೆಡಿಸಿಕೊಳ್ಳಲ್ಲ. ಕೇಂದ್ರ ಗೃಹ ಸಚಿವರಿಗೆ ಕಳುಹಿಸಿದ್ದು, ಅವರ ಬಳಿ ಪ್ರಸ್ತಾಪ ತಿರಸ್ಕೃತವಾಗಿದ್ದು ನನಗೆ ಗೊತ್ತಿಲ್ಲ ಎಂದು ಹೇಳಿದರು.

ಇವರು ಶಾಶ್ವತವಾಗಿ ಇರುತ್ತಾರಾ? ಮುಂದೆ ಬದಲಾಗಲಿದೆ, ಅದು ನನಗೆ ಗೊತ್ತಿದೆ. ಈಗ ಜಮೀನುಗಳಿಗೆ ಬೆಲ ಇಲ್ವಾ? ಅವರ ಜಮೀನುಗಳಿಗೆ ಬೆಲೆ ಏರಬಹುದು. 40 ವರ್ಷದ ಹಿಂದೆ ಖರೀದಿ ಮಾಡಿದ ಜಮೀನಿಗೆ ಎಸ್​​ಐಟಿ ಏನೋ ಮಾಡಿದ್ದರಲ್ಲಾ ಎಂದು ಕುಮಾರಸ್ವಾಮಿ ಕಿಡಿಕಾರಿದರು.

ನನ್ನ ಮೇಲೆ ಗದಾಪ್ರಹಾರ ಮಾಡ್ತಿದ್ದರಲ್ಲಾ, ಇವರು ಮಾಡಿಕೊಂಡದ್ದರಲ್ಲಿ ಶೇ 50 ಸರ್ಕಾರಿ ಜಮೀನುಗಳಿವೆ. ಇವರು ಮಾಡಿರುವುದು ನಮಗೆ ಗೊತ್ತಿದೆ. ಶಾಂತಿನಗರದ ದಲಿತರ ಜಾಗ ನುಂಗಿದ್ದು ಯಾರು? ರಾಮಕೃಷ್ಣ ಹೆಗಡೆ ಸರ್ಕಾರದಲ್ಲಿ ಕೊಟ್ಟ ಜಾಗ ನುಂಗಿದ್ದು ಯಾರು ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.


Spread the love

LEAVE A REPLY

Please enter your comment!
Please enter your name here