ವಿಜಯಸಾಕ್ಷಿ ಸುದ್ದಿ, ಗದಗ: ಸ್ಥಳೀಯ ಡಾ. ಜಾಕೀರ ಹುಸೇನ ಕಾಲೋನಿಯ ಮುಸ್ಲಿಂ ಜಮಾತ ಗದಗ ವತಿಯಿಂದ ಬಡ ಹಾಗೂ ಜಾಣ ವಿದ್ಯಾರ್ಥಿಗೆ ಶಾಲೆಯ ವಾರ್ಷಿಕ ಕಲಿಕಾ ಶುಲ್ಕ ನೀಡಿ ಸಹಾಯ ಮಾಡಿದರು.
ಗದಗ ಶಹರದ ರಾಯಲ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ 2ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ರಿಹಾನ ಮಾಬುಸಾಬ ಫಣಿಬಂದ ಇವನ ವಾರ್ಷಿಕ ಕಲಿಕಾ ಶುಲ್ಕ 18,397 ರೂಪಾಯಿಗಳನ್ನು ಜಾಕೀರ ಹುಸೇನ ಕಾಲೋನಿ ಮುಸ್ಲಿಂ ಜಮಾತಿನ ವತಿಯಿಂದ ಜಮಾತಿನ ಅಧ್ಯಕ್ಷರಾದ ಎಸ್.ಎ. ಟೋಪಿವಾಲೆ, ಸದಸ್ಯರಾದ ಎಂ.ಸಿ. ಶೇಖ್, ಎಂ.ಎಲ್. ಗುಳೇದಗುಡ್ಡ ಹಾಗೂ ಶಬ್ಬೀರ್ ಶಿರಹಟ್ಟಿ ಇವರು ಸದರಿ ವಿದ್ಯಾರ್ಥಿಯ ಶಾಲೆಗೆ ಹೋಗಿ ಶಾಲೆಯ ಮುಖ್ಯೋಪಾಧ್ಯಾಯರಾದ ಎ.ಎಮ್. ಢಾಲಾಯತ ಇವರ ಸಮ್ಮುಖದಲ್ಲಿ ಈ ವರ್ಷದ ಕಲಿಕಾ ಶುಲ್ಕದ ಚೆಕ್ ಅನ್ನು ನೀಡಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿ ಹಾಗೂ ಅರುಣಕುಮಾರ ಗಣಾಚಾರಿ ಉಪಸ್ಥಿತರಿದ್ದರು.



