ವಿಜಯಸಾಕ್ಷಿ ಸುದ್ದಿ, ಗದಗ: ಇಲ್ಲಿನ ಶಿವಾನಂದ ನಗರದ ಬಸವ ಸಮುದಾಯ ಭವನದಲ್ಲಿ ಜೂನ್ 1ರ ಬೆಳಿಗ್ಗೆ 7.30ಕ್ಕೆ ನಡೆಯಲಿರುವ ಬಸವದಳದ 1648ನೇ ಶರಣ ಸಂಗಮದಲ್ಲಿ ಸಹಜ ಶಿವಯೋಗ ಹಾಗೂ ಕುರುಬ ವೀರಗೊಲ್ಲಾಳ ಶರಣರ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಅಧ್ಯಕ್ಷತೆಯನ್ನು ಶರಣ ವಿ.ಕೆ. ಕರೇಗೌಡ್ರ ವಹಿಸುವರು. ಶರಣೆ ರೇಣಕ್ಕ ಕರೇಗೌಡ್ರ ಸಹಜ ಶಿವಯೋಗ ನಡೆಸುವರು ಹಾಗೂ ಶರಣೆ ಗಿರಿಜಕ್ಕ ಧರ್ಮರಡ್ಡಿ ಉಪನ್ಯಾಸ ನೀಡುವರು.
ಹಾಲುಮತ ಮಹಾಸಭಾದ ರಾಜ್ಯಾಧ್ಯಕ್ಷ ರುದ್ರಣ್ಣ ಗುಗಳಿ, ಗೌರವಾಧ್ಯಕ್ಷ ನಾಗರಾಜ ಎಂ.ಮೆಣಸಗಿ ಇವರುಗಳು ಅತಿಥಿಗಳಾಗಿ ಆಗಮಿಸುವರು. ಕಾರಣ ಬಸವದಳದ ಸದಸ್ಯರು, ಶರಣ ಸಾಹಿತ್ಯಾಭಿಮಾನಿಗಳು ಹಾಗೂ ಆಸಕ್ತರು ಭಾಗವಹಿಸಬೇಕೆಂದು ಸಂಘಟಿಕರ ಪರವಾಗಿ ಪ್ರಕಾಶ ಅಸುಂಡಿಯವರು ವಿನಂತಿಸಿದ್ದಾರೆ.



