ಮಂಗಳೂರು: ಪುತ್ತಿಲ ಪರಿವಾರ ಮುಖ್ಯಸ್ಥ ಅರುಣ್ ಕುಮಾರ್ ಪುತ್ತಿಲಗೆ ಗಡಿಪಾರು ನೊಟೀಸ್ ನೀಡಲಾಗಿದೆ. ಕರ್ನಾಟಕ ಪೊಲೀಸು ಅಧಿನಿಯಮ, 1963 ಕಲಂ: 58 ರಡಿ ನೋಟೀಸ್ ಜಾರಿ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ಕಲಬುರ್ಗಿ ಜಿಲ್ಲೆಯ ಶಹಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಗೆ ಗಡೀಪಾರು ಮಾಡಿ ನೋಟಿಸ್‌ನಲ್ಲಿ ಆದೇಶಿಸಲಾಗಿದೆ.
ನೋಟಿಸ್ ಪ್ರಕಾರ, ಅರುಣ್ ಪುತ್ತಿಲ್ ಅವರು ಜೂನ್ 6, 2025ರಂದು ವಿಚಾರಣೆಗೆ ಹಾಜರಾಗಬೇಕು. ದಕ್ಷಿಣ ಕನ್ನಡ ಜಿಲ್ಲೆಯಿಂದ ಕಲಬುರಗಿ ಜಿಲ್ಲೆಯ ಶಹಬಾದ್ ಪೊಲೀಸ್ ಠಾಣಾ ವ್ಯಾಪ್ತಿಗೆ ಗಡಿಪಾರು ಮಾಡುವ ಬಗ್ಗೆ ಚರ್ಚಿಸಲು ಈ ನೋಟಿಸ್ ನೀಡಲಾಗಿದೆ.
ಅವರು ವಿಚಾರಣೆಗೆ ಸ್ವತಃ ಅಥವಾ ತಮ್ಮ ನ್ಯಾಯವಾದಿಯ ಮೂಲಕ ಹಾಜರಾಗಿ, ತಮ್ಮ ಪರವಾಗಿ ವಾದಿಸಬೇಕು ಎಂಬ ಸೂಚನೆಯೂ ಇದೆ. ಹಾಜರಾಗದಿದ್ದರೆ, ಈ ಪ್ರಕರಣದಲ್ಲಿ ನಿಮಗೆ ಆಸಕ್ತಿ ಇಲ್ಲವೆಂದು ಪರಿಗಣಿಸಿ, ಲಭ್ಯವಿರುವ ಮಾಹಿತಿಯ ಆಧಾರದಲ್ಲಿ ಏಕಪಕ್ಷೀಯ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂಬ ಸ್ಪಷ್ಟ ಎಚ್ಚರಿಕೆಯೂ ನೋಟಿಸ್‌ನಲ್ಲಿ ನೀಡಲಾಗಿದೆ.



