ಕಲಬುರಗಿ:- ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯೊಬ್ಬರನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಕಲಬುರಗಿ ಹೊರವಲಯದ ಫಿರೋಜಾಬಾದ ಬಳಿ ಜರುಗಿದೆ. ಹಳೇ ದ್ವೇಷ ಹಿನ್ನಲೆ ಈ ಕೊಲೆ ನಡೆದಿದ್ದು, ನಡು ರಸ್ತೆಯಲ್ಲಿ ಬರ್ಬರ ಹತ್ಯೆ ಮಾಡಿರೋ ಶಂಕೆಯಿದೆ. ನಿಜಾಮುದ್ದೀನ್ ಬಾವರ್ಚಿ ಮೃತ ವ್ಯಕ್ತಿ.
Advertisement
ಕೊಲೆಯಾದ ವ್ಯಕ್ತಿ ಸಹ ಕೊಲೆ ಪ್ರಕರಣದಲ್ಲಿ ಜೈಲಿಗೆ ಹೋಗಿ ಕೆಲ ತಿಂಗಳ ಹಿಂದಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ ಎಂದು ತಿಳಿದು ಬಂದಿದೆ. ಈ ಕುರಿತು ಫರ್ತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಸಂಬಂಧ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.