ವಿಜಯಸಾಕ್ಷಿ ಸುದ್ದಿ, ಗದಗ: ಶರಣರ ಜ್ಞಾನ ಯೋಗಾಶ್ರಮ ಟ್ರಸ್ಟ್ ಗದಗ ಇವರು 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಇತ್ತೀಚಿಗೆ ಗದುಗಿನ ಕನಕ ಭವನದಲ್ಲಿ ಪ್ರಥಮ ಬಾರಿಗೆ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಮುಕ್ತ ಯೋಗಾಸನ ಸ್ಪರ್ಧೆಗಳಲ್ಲಿ ಎಸ್.ವಾಯ್.ಬಿ.ಎಂ.ಎಸ್ ಯೋಗಪಾಠಶಾಲೆಯ ತಂಡದಿಂದ ಭಾಗವಹಿಸಿದ ಡಿ.ಜಿ.ಎಂ. ಆಯುರ್ವೇದಿಕ್ ಮೆಡಿಕಲ್ ಕಾಲೇಜ ವಿದ್ಯಾರ್ಥಿನಿ ಸಂಜನಾ ಸಜ್ಜನರ (20-25 ವರ್ಷದ ಮಹಿಳೆಯರ ವಿಭಾಗ) ಪ್ರಥಮ ಸ್ಥಾನ, ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದ ಸದಸ್ಯೆ ಜಯಶ್ರೀ ಡಾವಣಗೇರಿ (50-60 ವರ್ಷದ ಮಹಿಳೆಯರ ವಿಭಾಗ (ಪ್ರಥಮ ಸ್ಥಾನ), ಬಸವ ಯೋಗ ಮಹಾವಿದ್ಯಾಲಯದ ಪ್ರಾಚಾರ್ಯ ಕೆ.ಎಸ್. ಪಲ್ಲಾದ (60 ವರ್ಷ ಮೇಲ್ಪಟ್ಟು ಪುರುಷರ ವಿಭಾಗ) ಪ್ರಥಮ ಸ್ಥಾನ ಪಡೆದಿದ್ದಾರೆ.
ಎಸ್.ವಾಯ್.ಬಿ.ಎಂ.ಎಸ್ ಯೋಗಪಾಠಶಾಲೆಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳೆಲ್ಲರ ಪರವಾಗಿ ಯೋಗ ಪಾಠಶಾಲೆಯ ಕಾರ್ಯಕರ್ತರಾದ ಎಂ.ಎಸ್. ಶಿರಿಯಣ್ಣವರ, ಡಾ. ಎಂ.ವ್ಹಿ. ಐಹೊಳ್ಳಿ, ಶಿವನಗೌಡ ಗೌಡರ, ಆಡಳಿತಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟರ ಹಾಗೂ ಅಭಿಮಾನಿಗಳು ಅಭಿನಂದನೆಗಳನ್ನು ತಿಳಿಸಿದ್ದಾರೆ.