ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದಾರೆ ಸಲ್ಮಾನ್ ಖಾನ್!?ಏನಿದು ಸಮಸ್ಯೆ!?

0
Spread the love

ಬಾಲಿವುಡ್​ ಸ್ಟಾರ್ ನಟ ಸಲ್ಮಾನ್ ಖಾನ್ ಶಾಕಿಂಗ್ ವಿಚಾರವೊಂದನ್ನು ಬಿಚ್ಚಿಟ್ಟಿದ್ದಾರೆ. ಸಲ್ಮಾನ್‌ ಖಾನ್‌ ದೈಹಿಕವಾಗಿ ಸದೃಢವಾಗಿ ಕಾಣಿಸಿಕೊಂಡರು, ಹಲವಾರು ಗಂಭೀರ ಪರಿಸ್ಥಿತಿಗಳನ್ನು ಎದುರಿಸುತ್ತಿದ್ದಾರೆ. ಇತ್ತೀಚೆಗೆ ʻದಿ ಗ್ರೇಟ್‌ ಇಂಡಿಯನ್‌ ಕಪಿಲ್‌ʼ ಶೋನಲ್ಲಿ ಮೊದಲು ಅತಿಥಿಯಾಗಿ ಭಾಗವಹಿಸಿದ ನಟ ಈ ವೇಳೆ ತಮ್ಮ ಮದುವೆ ಮತ್ತು ಆರೋಗ್ಯ ಸಮಸ್ಯೆಗಳ ಕುರಿತು ಅವರು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

Advertisement

ಕಳೆದ ಕೆಲವು ವರ್ಷಗಳಿಂದ ಗಂಭೀರ ಕಾಯಿಲೆಗಳ ವಿರುದ್ಧ ಹೋರಾಟ ನಡೆಸುತ್ತಿದ್ದೇನೆ. ಟ್ರೈಜಿಮಿನಲ್‌ ನರಶೂಲೆ ಎಂಬ ಕಾಯಿಲೆ ಇದೆ. ಅದರ ಹೊರತಾಗಿಯೂ ನಾನು ಕೆಲಸ ಮಾಡುತ್ತಿದ್ದೇನೆ ಎಂದು ಸಲ್ಮಾನ್‌ ಖಾನ್‌ ಹೇಳಿಕೊಂಡಿದ್ದಾರೆ. ಅಲ್ಲದೇ ನನಗೆ ಮೆದುಳಿನಲ್ಲಿ ರಕ್ತನಾಳ ಸಮಸ್ಯೆ ಇದೆ. ಅದಕ್ಕಾಗಿಯೂ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದೇನೆ. ಎವಿಎಮ್‌ ಸಮಸ್ಯೆ ಕೂಡ ಇದೆ. ನನ್ನ ಪಕ್ಕೆಲುಬುಗಳು ಮುರಿತವಾಗಿದೆ. ಆದರೂ ನಾನು ನಿರಂತರವಾಗಿ ಕೆಲಸ ಮಾಡುತ್ತಿದ್ದೇನೆ ಎಂದಿದ್ದಾರೆ.

ಏನಿದು ಟ್ರೈಜಿಮಿನಲ್ ನರಶೂಲೆ?

ಟ್ರೈಜಿಮಿನಲ್ ನರಶೂಲೆಯನ್ನು “ಆತ್ಮಹತ್ಯೆ ಕಾಯಿಲೆ” ಎಂದು ಕರೆಯಲಾಗುತ್ತದೆ. ಈ ಅಸ್ವಸ್ಥತೆಯು ಟ್ರೈಜಿಮಿನಲ್ ನರದ ಮೇಲೆ ಪರಿಣಾಮ ಬೀರುತ್ತದೆ. ಇದು ಹಲ್ಲುಜ್ಜುವುದು ಅಥವಾ ಅಗಿಯುವಂತಹ ಸರಳ ದೈನಂದಿನ ಚಟುವಟಿಕೆಗಳಿಂದ ತೀವ್ರವಾದ ಮುಖದ ನೋವಿಗೆ ಕಾರಣವಾಗುತ್ತದೆ.


Spread the love

LEAVE A REPLY

Please enter your comment!
Please enter your name here