ಕಲಬುರಗಿ:- ಮಾರಾಕಾಸ್ತ್ರಗಳಿಂದ ಕೊಚ್ಚಿ ಮೂವರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕಲಬುರಗಿ ಹೊರವಲಯದ ಪಟ್ನಾ ಗ್ರಾಮದ ಬಳಿ ತಡರಾತ್ರಿ ಜರುಗಿದೆ. ಕೊಲೆಯಾದವರನ್ನು 32 ವರ್ಷದ ಸಿದ್ಧಾರೂಢ, 25 ವರ್ಷದ ಜಗದೀಶ್, 35 ವರ್ಷದ ರಾಮಚಂದ್ರ ಎಂದು ಗುರುತಿಸಲಾಗಿದೆ.
ತಡರಾತ್ರಿ ಡ್ರೈವರ್ ಡಾಬಾಗೆ ನುಗ್ಗಿದ ಹಂತಕರು ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಈ ಹಿಂದೆ ಸೋಮು ಎಂಬಾತನ ಕೊಲೆ ಕೇಸ್ ನಲ್ಲಿ ಕೊಲೆಯಾದ ಸಿದ್ದಾರೂಡ, ಜಗದೀಶ್, ರಾಮಚಂದ್ರ ಜೈಲಿಗೆ ಹೋಗಿ ಬಂದಿದ್ದರು ಎಂದು ತಿಳಿದು ಬಂದಿದೆ. ಹೀಗಾಗಿ ಹಳೆಯ ದ್ವೇಷದ ಕಾರಣ ನಿನ್ನೆ ತಡರಾತ್ರಿ ರಾಚಯ್ಯ, ಈರಣ್ಣಾ, ನಾಗರಾಜ್ ಸೇರಿ ಹಲವು ದುಷ್ಕರ್ಮಿಗಳು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಘಟನೆ ಸಂಬಂಧ ಕಲಬುರಗಿ ಸಬ್ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರಿಂದ ತನಿಖೆ ಮುಂದುವರಿದಿದೆ.



