ತಪ್ಪಿದ ಚಾಲಕನ ನಿಯಂತ್ರಣ: ಡಿವೈಡರ್ ಗೆ ಬಸ್ ಡಿಕ್ಕಿ; ತಪ್ಪಿದ ದುರಂತ!

0
Spread the love

ಕೋಲಾರ:- ಇಲ್ಲಿನ ಕೆಜಿಎಫ್​​ನ ಬೆಮೆಲ್ ನಗರ ಬಳಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಡಿವೈಡರ್​ಗೆ ಡಿಕ್ಕಿ ಹೊಡೆದ ಘಟನೆ ಜರುಗಿದೆ. ಅದೃಷ್ಟವಶಾತ್ ಬಸ್ ನಲ್ಲಿದ್ದ ಸುಮಾರು 20 ಮಂದಿ ಪವಾಡದ ರೀತಿ ಬಚಾವ್ ಆಗಿದ್ದಾರೆ.

Advertisement

ಅಪಘಾತಕ್ಕೀಡಾದ ಬಸ್, ನರಸಾಪುರ ಕೈಗಾರಿಕಾ ಪ್ರದೇಶದ ಟಾಟಾ ಎಲೆಕ್ಟ್ರಾನಿಕ್ಸ್ ಕಂಪನಿಗೆ ಸೇರಿದ್ದು ಎನ್ನಲಾಗಿದೆ. ಘಟನೆಯಿಂದ 8 ಮಂದಿ ಗಾಯಗೊಂಡಿದ್ದಾರೆ. ಬಸ್​​ನಲ್ಲಿ 20 ಜನ ಇದ್ದರು. ಅದೃಷ್ಟವಶಾತ್, ಬಸ್​ನಲ್ಲಿದ್ದವರಿಗೆ ಗಂಭೀರ ಸ್ವರೂಪದ ಗಾಯಗಳಾಗಿಲ್ಲ. ಗಾಯಾಳುಗಳನ್ನು ಕೆಜಿಎಫ್ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೊದಲ ಪಾಳಿಯ ಕಾರ್ಮಿಕರನ್ನು ಕರೆದುಕೊಂಡು ಹೋಗುವ ವೇಳೆ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.


Spread the love

LEAVE A REPLY

Please enter your comment!
Please enter your name here