ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಸದ್ಯ ಪರಭಾಷೆಯಲ್ಲಿ ಮಿಂಚುತ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಸ್ಟಾರ್ ನಟರ ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳುವುತ್ತಿರುವ ನೀಲ್ ಇದೀಗ ಅಲ್ಲು ಅರ್ಜುನ್ ಜೊತೆ ಕೈ ಜೋಡಿಸಿದ್ದಾರೆ. ಜೊತೆಗೆ ಚಿತ್ರಕ್ಕೆ ಖಡಕ್ ಟೈಟಲ್ ಕೂಡ ಇಟ್ಟಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಕೆಜಿಫ್ 2’ ಬಳಿಕ ಪ್ರಶಾಂತ್ ನೀಲ್ ತೆಲುಗಿನಲ್ಲಿ ‘ಸಲಾರ್ʼ ಸಿನಿಮಾ ಮಾಡಿದರು. ಸದ್ಯ ಜೂನಿಯರ್ ಎನ್ಟಿಆರ್ ನಟನೆಯ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಆ ಬಳಿಕ ‘ಸಲಾರ್ 2’ ಕೂಡ ಮಾಡಬೇಕಿದೆ. ಈ ಮಧ್ಯೆ ಅಲ್ಲು ಅರ್ಜುನ್ ಜೊತೆ ಸಿನಿಮಾ ಮಾಡೋ ಆಫರ್ ಸಿಕ್ಕಿದ್ದು ಸದ್ಯದಲ್ಲೇ ಶೂಟಿಂಗ್ ಶುರುವಾಗಲಿದೆ.
ಪ್ರಶಾಂತ್ ನೀಲ್ ಹಾಗೂ ಅಲ್ಲು ಅರ್ಜುನ್ ಕಾಂಬಿನೇಷನ್ ನ ಸಿನಿಮಾಗೆ ರಾವಣಂ ಎಂದು ಟೈಟಲ್ ಇಡಲಾಗಿದೆ. ಈ ಕ್ಯಾಚಿ ಟೈಟಲ್ ನೋಡಿ ಫ್ಯಾನ್ಸ್ ಫುಲ್ ಥ್ರಿಲ್ ಆಗಿದ್ದಾರೆ. ಈ ಬಗ್ಗೆ ಪ್ರಶಾಂತ್ ನೀಲ್ ಆಗಲಿ, ಅಲ್ಲು ಅರ್ಜುನ್ ಆಗಲಿ ಸ್ಪಷ್ಟನೆ ನೀಡಿಲ್ಲ.