ನಟಿ ರಶ್ಮಿಕಾ ಮಂದಣ್ಣ ಮುಟ್ಟಿದ್ದೆಲ್ಲ ಚಿನ್ನವಾಗ್ತಿದೆ. ರಶ್ಮಿಕಾ ಬ್ಯಾಕ್ ಟು ಬ್ಯಾಕ್ ಸ್ಟಾರ್ ನಟರ ಸಿನಿಮಾಗಳಿಗೆ ಬಣ್ಣ ಹಚ್ಚುತ್ತಿದ್ದು ಆಕೆಯ ಸಿನಿಮಾಗಳು ನೂರು ಕೋಟಿ ಕ್ಲಬ್ ಸೇರುತ್ತಿದೆ. ಇದೀಗ ಕುಬೇರ ಸಿನಿಮಾ ಗೆದ್ದ ಖುಷಿಯಲ್ಲಿರುವ ನಟಿ ಇದೇ ಖುಷಿಯಲ್ಲಿ ಹೊಸ ಸಿನಿಮಾ ಘೋಷಿಸಿದ್ದಾರೆ.
ಈಗಾಗ್ಲೆ ಹಲವು ಭಾಷೆಗಳಲ್ಲಿ ಗುರುತಿಸಿಕೊಂಡಿರುವ ರಶ್ಮಿಕಾ ಸದ್ಯ ಬಾಲಿವುಡ್ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ರಶ್ಮಿಕಾ ನಟಿಸಿರುವ ಹಲವು ಸಿನಿಮಾಗಳಲ್ಲಿ ನಾಯಕಿಯಾಗಿಯೇ ಗುರುತಿಸಿಕೊಂಡಿದ್ದು ಹೆಚ್ಚು. ಸದ್ಯ ರಶ್ಮಿಕಾ ಹೊಸ ಸಿನಿಮಾವನ್ನು ಘೋಷಿಸಿದ್ದು ಅದರ ಟೈಟಲ್ ನಾಳೆ ಅಂದರೆ ಜೂನ್ 27ರಂದು ಅನೌನ್ಸ್ ಆಗಲಿದೆ. ಅಂದಹಾಗೆ ಈ ಸಿನಿಮಾದಲ್ಲಿ ರಶ್ಮಿಕಾ ವಾರಿಯರ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಸದ್ಯ ರಶ್ಮಿಕಾ ಹಂಚಿಕೊಂಡಿರುವ ಪೋಸ್ಟರ್ ನಲ್ಲಿ ನಟಿ ಕಾಡಿನ ಮಧ್ಯೆ ಯುದ್ಧಕ್ಕೆ ಸಿದ್ದವಾಗಿ ನಿಂತಿರುವ ರೀತಿ ಇದೆ. ಕೈಯಲ್ಲಿ ಆಯುಧವೊಂದನ್ನು ಹಿಡಿದಿದ್ದು ಯುದ್ಧಕ್ಕೆ ಸನ್ನಧರಾಗಿರುವಂತಿದೆ. ‘ಬೇಟೆಗೊಳಗಾಗಿ ಗಾಯಗೊಂಡರೂ ಅಚಲವಾಗಿ ನಿಂತಿದ್ದಾಳೆ’ಎಂಬ ಅರ್ಥ ಬರುವ ರೀತಿಯಲ್ಲಿ ಪೋಸ್ಟರ್ ಮೇಲೆ ಬರೆಯಲಾಗಿದೆ. ಈ ಸಿನಿಮಾದ ಪೋಸ್ಟರ್ ಹಾಗೂ ಟೈಟಲ್ ಜೂನ್ 27ರ ಬೆಳಗ್ಗೆ 10:08ಕ್ಕೆ ರಿಲೀಸ್ ಆಗಲಿದೆ.
ರಶ್ಮಿಕಾ ನಟನೆಯ ಮುಂದಿನ ಚಿತ್ರವನ್ನು ಅನ್ಫಾರ್ಮುಲಾ ಫಿಲ್ಮ್ಸ್ ನಿರ್ಮಾಣ ಮಾಡುತ್ತಿದೆ. ರಶ್ಮಿಕಾ ಮಂದಣ್ಣ ಅವರು ಈಗಾಗಲೇ ‘ದಿ ಗರ್ಲ್ಫ್ರೆಂಡ್’ ಹೆಸರಿನ ಮಹಿಳಾ ಪ್ರಧಾನ ಚಿತ್ರವನ್ನು ಮಾಡುತ್ತಿದ್ದಾರೆ. ಈ ಸಿನಿಮಾ ಬಗ್ಗೆ ಫ್ಯಾನ್ಸ್ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಮಧ್ಯೆ ನಟಿ ಮತ್ತೊಂದು ಮಹಿಳಾ ಪ್ರಧಾನ ಸಿನಿಮಾದಲ್ಲಿ ನಟಿಸುತ್ತಿರುವುದು ಅಭಿಮಾನಿಗಳಿಗೆ ಖುಷಿ ನೀಡಿದೆ.