HomeCrime Newsಕೋಡಿಮಠದ ಶ್ರೀ ಬಳಿ ಚಿನ್ನಾಭರಣ ದೋಚಿದ್ದ ಅಂತರಾಜ್ಯ ಕಳ್ಳ ಅರೆಸ್ಟ್..!

ಕೋಡಿಮಠದ ಶ್ರೀ ಬಳಿ ಚಿನ್ನಾಭರಣ ದೋಚಿದ್ದ ಅಂತರಾಜ್ಯ ಕಳ್ಳ ಅರೆಸ್ಟ್..!

For Dai;y Updates Join Our whatsapp Group

ಬೆಂಗಳೂರು: ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳ ಬಳಿ ಕಳ್ಳತನ ಮಾಡಿದ್ದ ಅಂತರಾಜ್ಯ ಕಳ್ಳನನ್ನು ಬಂಧಿಸಲಾಗಿದೆ. ಉತ್ತರಕಾಂಡದ ನೈನಿತಾಲ್ ಮೂಲದ ಜಿತೇಂದ್ರ ಕುಮಾರ್ ಬಂಧಿತ ಆರೋಪಿಯಾಗಿದ್ದು,

2018 ರಲ್ಲಿ ರೈಲಿನ ಎಸಿ ಕೋಚ್ ನಲ್ಲಿ ಬಾಗಲಕೋಟೆಯಿಂದ ಅರಸೀಕೆರೆಗೆ ಪ್ರಯಾಣ ಮಾಡ್ತಿದ್ದ ಸ್ವಾಮೀಜಿ ಲೆದರ್ ಬ್ಯಾಗ್ ನಲ್ಲಿ ಚಿನ್ನದ ಆಭರಣ ನಗದು ಹಣ ಇಟ್ಟು ನಿದ್ದೆಗೆ ಜಾರಿದ್ದರು.

ತಡರಾತ್ರಿ 2.15 ಕ್ಕೆ ಎದ್ದು ನೋಡಿದ್ದಾಗ ಕಳ್ಳತನವಾಗಿತ್ತು.. ಈ ವೇಳೆ ಬ್ಯಾಗ್ ನಲ್ಲಿದ್ದ ಹಣ ಆಭರಣ ಮಾಯಾವಾಗಿತ್ತು. ಚಿನ್ನದ ಸರ 250 ಗ್ರಾಂ, ಗೌರಿಶಂಕರ ರುದ್ರಾಕ್ಷಿ ಪದಕ, ಎರಡು ಚಿನ್ನದ ಉಂಗುರಗಳು 50 ಗ್ರಾಂ, 1.62 ಲಕ್ಷ ನಗದು ಹಣ ಇಟ್ಟಿದ್ದರು.

ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ನಡೆಸಿದ ಅರಸೀಕೆರೆ ರೈಲ್ವೆ ಪೊಲೀಸರು ಏಳು ವರ್ಷಗಳ ನಂತರ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನಿಂದ 22 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img