Home Gadag News ವಾಹನಗಳ ತಪಾಸಣೆ; 75 ಸವಾರರಿಗೆ ದಂಡ

ವಾಹನಗಳ ತಪಾಸಣೆ; 75 ಸವಾರರಿಗೆ ದಂಡ

0
ವಾಹನಗಳ ತಪಾಸಣೆ; 75 ಸವಾರರಿಗೆ ದಂಡ
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ, ಗದಗ ಉಪವಿಭಾಗದ ಡಿಎಸ್‌ಪಿ ಮುರ್ತುಜಾ ಖಾದ್ರಿ ನೇತೃತ್ವದಲ್ಲಿ, ಬೆಟಗೇರಿ ಸಿಪಿಐ ಧೀರಜ್ ಶಿಂಧೆ ಮಾರ್ಗದರ್ಶನದಲ್ಲಿ, ಗದಗ ಸಂಚಾರ ಪೊಲೀಸ್ ಠಾಣೆಯ ಪಿಎಸ್‌ಐ ಕಿರಣಕುಮಾರ ಹಾಗೂ ಸಂಚಾರ ಠಾಣೆಯ ಸಿಬ್ಬಂದಿ ವರ್ಗದವರು ಗದಗ-ಬೆಟಗೇರಿ ಅವಳಿ ನಗರದಲ್ಲಿ ಸಂಚರಿಸುವ ದ್ವಿಚಕ್ರ ವಾಹನಗಳ ಮೇಲೆ ವಿಶೇಷ ಕಾರ್ಯಾಚರಣೆ ಕೈಗೊಂಡು ಅವಳಿ ನಗರದಲ್ಲಿ ಭಾರತೀಯ ಮೋಟಾರು ವಾಹನ ಕಾಯ್ದೆಗಳನ್ನು ಉಲ್ಲಂಘನೆ ಮಾಡಿ ಸಂಚರಿಸುವ ವಾಹನಗಳ ತಪಾಸಣೆ ನಡೆಸಿದರು.

ತಪಾಸಣೆಯ ಕಾಲಕ್ಕೆ ನೋಂದಣಿ ಸಂಖ್ಯೆ ಅಳವಡಿಸದೆ, ದೋಷಪೂರಿತ ನೋಂದಣಿ ಸಂಖ್ಯೆ ಅಳವಡಿಸಿಕೊಂಡು ವಾಹನ ಚಲಾವಣೆ, ನೋಂದಣಿ ಸಂಖ್ಯೆ ಮೇಲೆ ಸ್ಟಿಕ್ಕರ್ ಅಂಟಿಸಿ ಸಂಚರಿಸಿದ ಒಟ್ಟು 130 ದ್ವಿಚಕ್ರ ವಾಹನಗಳನ್ನು ತಡೆ ಹಿಡಿದಿದ್ದು, ನೋಂದಣಿ ಸಂಖ್ಯೆ ಅಳವಡಿಸದೆ ವಾಹನ ಚಾಲನೆ ಮಾಡಿದ ಒಟ್ಟು 53 ವಾಹನಗಳನ್ನು, ದೋಷಪೂರಿತ ನೋಂದಣಿ ಸಂಖ್ಯೆ ಇರುವ ಒಟ್ಟು 65 ಮತ್ತು ಸ್ಟಿಕ್ಕರ್ ಅಂಟಿಸಿ ವಾಹನ ಚಾಲನೆ ಮಾಡಿದ ಒಟ್ಟು 12 ವಾಹನಗಳ ಮೇಲೆ ಥರ್ಡ್ ಐ ಪ್ರಕರಣಗಳು ಇರುವ ಬಗ್ಗೆ ಪರೀಶೀಲನೆ ಮಾಡಿ ಒಟ್ಟು 75 ಪ್ರಕರಣಗಳನ್ನು ಪತ್ತೆ ಹಚ್ಚಿ ದಂಡ ವಿಧಿಸಿದರು.

ಈ ಎಲ್ಲ ಸವಾರರ ಮೇಲೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಂಡು, ಸವಾರರಿಗೆ ತಿಳಿವಳಿಕೆ ನೀಡಲಾಯಿತು.


Spread the love

LEAVE A REPLY

Please enter your comment!
Please enter your name here