ಧಾರವಾಡ: ಚಾಕು ಇಟ್ಟುಕೊಂಡೇ ಚನ್ನಮ್ಮನ ಕಿತ್ತೂರಿನಿಂದ ಗೂಡ್ಸ್ ವಾಹನದಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಆಕಳು ಹಾಗೂ ಎಮ್ಮೆಗಳನ್ನು ಬಜರಂಗದಳ ಕಾರ್ಯಕರ್ತರು ರಕ್ಷಿಸಿದ್ದಾರೆ.
ಕಿತ್ತೂರಿನಿಂದ ಹುಬ್ಬಳ್ಳಿಗೆ ಗೂಡ್ಸ್ ವಾಹನದಲ್ಲಿ ಆಕಳು ಹಾಗೂ ಎಮ್ಮೆ ಸಾಗಿಸುತ್ತಿರುವ ಮಾಹಿತಿ ಪಡೆದ ಬಜರಂಗ ದಳ ಕಾರ್ಯಕರ್ತರು, ಆ ಗೂಡ್ಸ್ ವಾಹನ ಹುಬ್ಬಳ್ಳಿ, ಧಾರವಾಡ ಬೈಪಾಸ್ ರಸ್ತೆಯಲ್ಲಿರುವ ನರೇಂದ್ರ ಟೋಲ್‌ಗೇಟ್ ದಾಟಿ ಬಂದ ತಕ್ಷಣವೇ ಅದನ್ನು ಅಡ್ಡಗಟ್ಟಿ ನಿಲ್ಲಿಸಿದ್ದಾರೆ.
ಆ ಕ್ಷಣ ವಾಹನದಲ್ಲಿದ್ದ ಇಬ್ಬರು ಪರಾರಿಯಾಗಿದ್ದು, ಚಾಲಕ ಮಾತ್ರ ಸಿಕ್ಕಿಬಿದ್ದಿದ್ದಾನೆ. ವಾಹನದಲ್ಲಿ ಚಾಕು ಸಹ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಹೈವೆ ಪೆಟ್ರೋಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದರು.



