ವಿಜಯಸಾಕ್ಷಿ ಸುದ್ದಿ, ಗದಗ: ರೋಟರಿ ಗದಗ ಸೆಂಟ್ರಲ್ ವತಿಯಿಂದ 2025-26ನೇ ಸಾಲಿನ ನೂತನ ಪದಾಧಿಕಾರಿಗಳಿಗೆ ಸೇವಾದೀಕ್ಷೆ ಸಮಾರಂಭದ ನಿಮಿತ್ತ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ನಗರದ ರೋ. ಪಿಡಿಜಿ ಡಾ.ಎನ್.ಬಿ. ಪಾಟೀಲ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಪ್ರತಿಯೊಬ್ಬರೂ ಸಸಿಗಳನ್ನು ನೆಟ್ಟು ಅವುಗಳನ್ನು ಜೋಪಾನ ಮಾಡಿದರೆ ಅವು ನಿಮ್ಮನ್ನು ಆರೋಗ್ಯಪೂರ್ಣವಾಗಿರುವಂತೆ ಕಾಪಾಡುತ್ತವೆ ಎಂದರು.
ಈ ಸಂದರ್ಭದಲ್ಲಿ ರೋಟರಿ ಗದಗ ಸೆಂಟ್ರಲ್ ಅಧ್ಯಕ್ಷ ಚೇತನ ಅಂಗಡಿ, ಕಾರ್ಯದರ್ಶಿ ರಾಜು ಉಮನಾಬಾದಿ, ಖಜಾಂಚಿ ಡಾ. ಪ್ರಭು ಗಂಜಿಹಾಳ, ಅಸಿಸ್ಟಂಟ್ ಗವರ್ನರ್ ವಿ.ಕೆ. ಗುರುಮಠ, ಮಾಜಿ ಅಸಿಸ್ಟಂಟ್ ಗವರ್ನರ್ ಮಲ್ಲಿಕಾರ್ಜುನ ಐಲಿ, ರೊ. ಇಂ. ಮೋಹನ ಹುಲಕೋಟಿ, ಡಾ. ಸಿ.ಬಿ. ಹಿರೇಗೌಡರ, ಶಶಿಧರ ದಿಂಡೂರ, ಎಂ.ಸಿ. ಬೇಲೇರಿ, ಎಂ.ಎಂ. ಬಡ್ನಿ, ಪ್ರಕಾಶ ಉಗಲಾಟದ, ಎಸ್.ಆಯ್. ಅಣ್ಣಿಗೇರಿ, ಆರ್.ಬಿ. ದಾನಪ್ಪಗೌಡರ, ಸಂತೋಷ ತೋಟಗಂಟಿ, ವಿಜಯಕುಮಾರ ಹಿರೇಮಠ, ಚಂದ್ರಗೌಡ ಹಿರೇಗೌಡರ, ಮಂಜುನಾಥ ಕಬಾಡಿ, ಶ್ರೀಕಾಂತ ಲಕ್ಕುಂಡಿ, ರಾಜು ಕುರಡಗಿ, ಶರಣಬಸಪ್ಪ ಗುಡಿಮನಿ, ಈಶಣ್ಣ ಗದ್ದಿಕೇರಿ, ಬಿ.ಬಿ. ಸಂಕನಗೌಡರ, ರಾಜು ಕಂಟಿಗೊಣ್ಣವರ, ಸಿ.ಜಿ. ಹಿರೇಗೌಡರ, ಮಲ್ಲಿಕಾರ್ಜುನ ಚಂದಪ್ಪನವರ, ಪರಶುರಾಮ ನಾಯ್ಕರ್, ವಿನಯ ವಿ.ಅಂಗಡಿ ಮೊದಲಾದವರು ಪಾಲ್ಗೊಂಡಿದ್ದರು.



