ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪರಿಶಿಷ್ಟ ಜಾತಿ ಗಣತಿ ಮಾಡಿದ ಗಣತಿದಾರರಿಗೆ ಹಾಗೂ ಮೇಲ್ವಿಚಾರಕರಿಗೆ ಗೌರವಧನ ಹಾಗೂ ಗಳಿಕೆ ರಜೆ ಮಂಜೂರಿಗಾಗಿ ಗುರುವಾರ ಪಟ್ಟಣದಲ್ಲಿ ತಹಸೀಲ್ದಾರ ಧನಂಜಯ ಎಮ್ ಅವರಿಗೆ ಸರಕಾರಿ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲೂಕು ಘಟಕದ ವತಿಯಿಂದ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷ ಆನಂದಕುಮಾರ ಮುಳಗುಂದ, ಉಪಾಧ್ಯಕ್ಷ ಹಾಶೀಮ್ ಗುತ್ತಲ, ಖಜಾಂಚಿ ಶೇಖಪ್ಪ ಲಮಾಣಿ, ಮುಖ್ಯೋಪಾಧ್ಯಾಯ ಬಸವರಾಜ ಪಟ್ಟೇದ, ಬಸವರಾಜ ಗಾಯಕವಾಡ, ಸಂಘದ ಪದಾಧಿಕಾರಿಗಳಾದ ಸುಣಗಾರ, ಅಂಗಡಿ, ಹಿರೇಮಠ, ಸಹಶಿಕ್ಷಕರಾದ ಸಂತೋಷ ರಾಠೋಡ, ನದಾಫ್, ದಿಂಡವಾಡ, ಮಿಯಾನವರ ಹಾಜರಿದ್ದರು.



