HomeGadag Newsನೂತನ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸನ್ಮಾನ

ನೂತನ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸನ್ಮಾನ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲೆಗೆ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾಗಿ ನೇಮಕಗೊಂಡಿರುವ ರೋಹನ್ ಜಗದೀಶ್ ಅವರನ್ನು ನವ ಕರ್ನಾಟಕ ಜನಪರ ಅಭಿವೃದ್ಧಿ ವೇದಿಕೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಗದಗ ಜಿಲ್ಲಾ ಅಧ್ಯಕ್ಷ ಶಿವಕುಮಾರ್ ಚ.ರಾಮನಕೊಪ್ಪ ಮಾತನಾಡಿ, ನ್ಯಾಯ ಪಾಲನೆ, ಶಿಸ್ತಿನ ವ್ಯವಸ್ಥೆ ಹಾಗೂ ಸಾರ್ವಜನಿಕರ ಭದ್ರತೆಯ ಸಂಕೇತವಾಗಿ ನಿಲ್ಲುವಂತಹ ವ್ಯಕ್ತಿತ್ವ ರೋಹನ್ ಜಗದೀಶ್ ಅವರದ್ದು. ಅವರ ನೇತೃತ್ವದಲ್ಲಿ ಜಿಲ್ಲೆ ಮುನ್ನಡೆಯುವದು ನಿಶ್ಚಿತ ಎಂದರು.

ರಾಜಾಧ್ಯಕ್ಷ ಪಿ.ಸುಬ್ರಮಣ್ಯಂ ರೆಡ್ಡಿ ಅಭಿನಂದನೆ ಸಲ್ಲಿಸಿ ಮಾತನಾಡಿ, ನಮ್ಮ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ, ಸಾರ್ವಜನಿಕರ ಹಿತರಕ್ಷಣೆ ಹಾಗೂ ಭ್ರಷ್ಠಾಚಾರದ ವಿರುದ್ಧ ನಿರ್ಭೀತಿಯಿಂದ ಕಾರ್ಯ ನಿರ್ವಹಿಸಬಲ್ಲ ರೋಹನ್ ಜಗದೀಶ್ ಅವರ ಸೇವೆ ನಮಗೆ ಆಶಾಕಿರಣವಾಗಿರಲಿದೆ ಎಂದರು.

ಈ ಸಂದರ್ಭದಲ್ಲಿ ಕಾರ್ಮಿಕ ಘಟಕ ರಾಜ್ಯಾಧ್ಯಕ್ಷ ಶಿವಾನಂದಯ್ಯ ಹಿರೇಮಠ, ಗಣ್ಯರಾದ ಎಸ್.ಎಸ್. ರಡ್ಡೇರ, ರೈತ ಘಟಕ ರಾಜ್ಯಾಧ್ಯಕ್ಷ ಎಸ್.ವಿ. ಪಲ್ಲೇದ, ರಾಜ್ಯ ಪ್ರಧಾನ ಕಾರ್ಯದರ್ಶಿ ಯು.ಆರ್. ಭೂಸನೂರಮಠ, ರಾಜ್ಯ ಕಾರ್ಯದರ್ಶಿ ಹುಚ್ಚಣ್ಣವರ, ಜಿಲ್ಲಾ ಕಾರ್ಯದರ್ಶಿ ಷಣ್ಮುಖ ಸುಲಾಖೆ, ರಾಜ್ಯ ವಕ್ತಾರ ಪ್ರಭಾಕರ್ ಹೆಬಸೂರ, ರಾಜ್ಯ ನಿರ್ದೇಶಕ ಎಮ್.ಎಸ್. ಪರ್ವತಗೌಡ್ರ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!